Jul 8, 2023, 11:27 AM IST
ಮಂಡ್ಯ: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ(Bangalore-Mysore highway) ಅತಿಯಾದ ವೇಗದಿಂದ ಹಲವಾರು ಸಾವುಗಳ ಸಂಭವಿಸುತ್ತಿವೆ. ಇದಕ್ಕೆ ಬ್ರೇಕ್ ಹಾಕಲು ಪೊಲೀಸರು (police) ಮಾಸ್ಟರ್ ಪ್ಲ್ಯಾನ್‌ವೊಂದನ್ನು ಮಾಡಿದ್ದಾರೆ. ಈ ರಸ್ತೆಯಲ್ಲಿ ಸಂಚರಿಸುವವರು ಇನ್ಮುಂದೆ ವೇಗವಾಗಿ ಹೋದ್ರೆ, ದಂಡವನ್ನು ಹಾಕಲಾಗುತ್ತದೆ. ಪ್ರತಿ ಗಂಟೆಗೆ 100ಕ್ಕಿಂತ ಹೆಚ್ಚು ವೇಗದಲ್ಲಿ ಸಂಚರಿಸಿದ್ರೆ, ಸಾವಿರ ರೂಪಾಯಿ ದಂಡವನ್ನು ಹಾಕಲಾಗುತ್ತದೆ. ಇದಕ್ಕಾಗಿ ಸ್ಪೀಡ್ ಹಂಟರ್‌ನನ್ನು(speed hunter) ಅಳವಡಿಸಲು ಪೊಲೀಸರು ಮುಂದಾಗಿದ್ದಾರೆ. ಇದು ವಾಹನದ(Vehicles) ನಂಬರ್ ಮತ್ತು ವೇಗವನ್ನು ದಾಖಲು ಮಾಡಲಿದೆ. ಹಾಗಾಗಿ ದುಬಾರಿ ಟೋಲ್ (Toll)ಜೊತೆಗೆ ಇನ್ಮುಂದೆ ದಂಡ ಸಹ ಬೀಳಲಿದೆ. ಶ್ರೀರಂಗಪಟ್ಟಣದ ಟೋಲ್ ಬಳಿ ಸ್ಪೀಡ್ ಹಂಟರ್ ಅಳವಡಿಸಲಾಗುವುದು.
ಇದನ್ನೂ ವೀಕ್ಷಿಸಿ: ಕನ್ನಡ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಕ್ಸಸ್ ಆಗಲು ಕನ್ನಡಿಗರೇ ಕಾರಣ: ರಿಷಬ್ ಶೆಟ್ಟಿ