ಅಪೆಕ್ಸ್ ಬ್ಯಾಂಕ್‌ನಲ್ಲಿ ಸಾಲ ನೀಡುವಲ್ಲಿ ಗೋಲ್‌ಮಾಲ್..? ಸಿದ್ದರಾಮಯ್ಯ ಸರ್ಕಾರದ ಮತ್ತೊಬ್ಬ ಸಚಿವನಿಗೆ ಸಂಕಷ್ಟ !

Jul 17, 2024, 1:10 PM IST

ಸಿದ್ದರಾಮಯ್ಯ ಸರ್ಕಾರದ ಮತ್ತೊಬ್ಬ ಸಚಿವನಿಗೆ ಸಂಕಷ್ಟ ಎದುರಾಗಿದ್ದು, ವಾಲ್ಮೀಕಿ ನಿಗಮ ಹಗರಣದ ಬೆನ್ನಲ್ಲೇ ಮತ್ತೊಂದು ಅಕ್ರಮ ಬಯಲಾಗಿದೆ.
ಅಪೆಕ್ಸ್ ಬ್ಯಾಂಕ್‌ನಲ್ಲಿ(Apex Bank) ಸಾಲ ನೀಡುವಲ್ಲಿ ಭಾರೀ ಗೋಲ್‌ಮಾಲ್ ನಡೆದಿದೆ ಎನ್ನಲಾಗ್ತಿದೆ. ಬ್ಯಾಂಕ್‌ನಿಂದ ಬೇನಾಮಿ ಸಾಲ(Loan) ನೀಡಿ ಅವ್ಯವಹಾರ ಮಾಡಲಾಗಿದೆಯಂತೆ. ಸಹಕಾರ ಸಚಿವ ಕೆ.ಎನ್.ರಾಜಣ್ಣ(Minister KN Rajanna) ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಹಲವಾರು ಕಂಪನಿಗೆ ಬೇನಾಮಿ ಹೆಸರಲ್ಲಿ ಸಾಲ ನೀಡಿರುವ ಆರೋಪ ಕೇಳಿಬಂದಿದ್ದು, ಸಾಲ ಪಡೆದ ಕಂಪನಿಗಳು ದಿವಾಳಿ ಎಂಬ ಹೆಸರಲ್ಲಿ ಬ್ಯಾಂಕ್‌ಗೆ ಮೋಸ ಮಾಡಲಾಗಿದೆ. ಕೆ.ಎನ್.ರಾಜಣ್ಣ ಸೇರಿ ಹಲವರ ಕೈವಾಡ ಇರುವ ಬಗ್ಗೆ ಆರೋಪ ಕೇಳಿಬಂದಿದೆ. ಸರ್ಕಾರಕ್ಕೆ ಹಲವು ಬಾರಿ ದೂರು ಕೊಟ್ರೂ ಕ್ರಮಕೈಗೊಳ್ಳದ ಆರೋಪ ಕೇಳಿಬಂದಿದೆ. ಆಡಿಟ್ ರಿಪೋರ್ಟ್, ತನಿಖಾ ವರದಿ, ರಿಜಿಸ್ಟ್ರಾರ್ ವರದಿ ನೀಡಿದ್ರೂ ಕ್ರಮವಿಲ್ಲ. ಸರ್ಕಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದ ದೂರುದಾರ ದಿನೇಶ್ ಕಲ್ಲಹಳ್ಳಿ. 2021 ರಲ್ಲಿ ಆಡಿಟ್ ರಿಪೋರ್ಟ್ ನಲ್ಲಿ ಅಕ್ರಮ ನಡೆದಿದ್ದ ಬಗ್ಗೆ ಉಲ್ಲೇಖ ಮಾಡಲಾಗಿದೆ. ತನಿಖೆ ನಡೆಸುವಂತೆ ಸಹಕಾರ ಇಲಾಖೆ ರಿಜಿಸ್ಟ್ರಾರ್ ಪ್ರಸನ್ನ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. 4 ವರ್ಷ ಕಳೆದರೂ ಯಾವುದೇ ಕ್ರಮಗೈಗೊಳ್ಳದೇ ಸರ್ಕಾರದಿಂದ ವಿಳಂಬ ಮಾಡಲಾಗಿದೆಯಂತೆ. ಕೇಸ್ ಸಂಬಂಧ RTI ಮೂಲಕ ದಾಖಲೆ  ಕೋರಿದ್ದ ದಿನೇಶ್ ಕಲ್ಲಹಳ್ಳಿ, ತನಿಖೆ ಪ್ರಗತಿಯಲ್ಲಿದೆ ಎಂದು ಉತ್ತರ ನೀಡಲು ನಿರಾಕರಿಸಿದ್ದ ಸರ್ಕಾರ. ಖಾಸಗಿ ದೂರು ಸಲ್ಲಿಕೆ ಮಾಡಲು ಮಾಡಿರುವ ದಿನೇಶ್ ಕಲ್ಲಹಳ್ಳಿ. ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ. ದಿನೇಶ್ ಕಲ್ಲಹಳ್ಳಿ ಮನವಿ ಸರ್ಕಾರಕ್ಕೆ ರವಾನೆ ಮಾಡಿದ್ದ ರಾಜ್ಯಪಾಲರು. ರಾಜ್ಯಪಾಲರ ಕಚೇರಿ ಸೂಚನೆಗೂ ಕ್ಯಾರೆ ಎನ್ನದ ಸರ್ಕಾರದ ವಿರುದ್ಧ ರಿಟ್ ಸಲ್ಲಿಕೆ ಮಾಡಲಾಗಿದೆ.

ಇದನ್ನೂ ವೀಕ್ಷಿಸಿ:  ಮಹಾರಾಷ್ಟ್ರದಲ್ಲಿ ಎನ್‌ಡಿಎ ಕೂಟಕ್ಕೆ ಕಾದಿದ್ಯಾ ಬಿಗ್ ಶಾಕ್? ವಿಧಾನಸಭೆಯಲ್ಲೂ ಲೋಕಸಭೆ ಮಾದರಿಯ ಫಲಿತಾಂಶ..?