ಕಬ್ಬು ತುಂಬಿದ ಟ್ರ್ಯಾಕ್ಟರ್‌ ಚಲಾಯಿಸಿದ ಮಹಿಳೆ: ನೆಟ್ಟಿಗರಿಂದ ಮಹಾದೇವಿಗೆ ಶಹಬ್ಬಾಸ್ ಗಿರಿ, ವಿಡಿಯೋ ವೈರಲ್‌

Oct 29, 2023, 10:47 AM IST

ಚಿಕ್ಕೋಡಿ: ಡಬಲ್ ಟೈಲರ್ ಕಬ್ಬು ತುಂಬಿದ ಟ್ರ್ಯಾಕ್ಟರ್‌ನನ್ನು(Tractor) ಮಹಿಳೆ ಚಲಾಯಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಮಹಾದೇವಿ ಎಮ್ಮ್ಯಾಗೋಳ ಕಬ್ಬು ತುಂಬಿದ ಟ್ರಾಕ್ಟರ್ ಚಲಾಯಿಸಿದ ಮಹಿಳೆಯಾಗಿದ್ದಾರೆ(Woman). ಹಿಡಕಲ್ ಡ್ಯಾಂ ಗ್ರಾಮದಿಂದ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಗೆ ಅವರು ಕಬ್ಬನ್ನು(Sugarcane) ಸಾಗಿಸಿದ್ದಾರೆ. ಮಹಿಳೆ ಟ್ರ್ಯಾಕ್ಟರ್‌ ಚಲಾಯಿಸುವ ವಿಡಿಯೋ ಸದ್ಯ ವೈರಲ್‌ ಆಗಿದೆ. ನೆಟ್ಟಿಗರಿಂದ ಮಹಾದೇವಿಯ ಸಾಹಸಕ್ಕೆ ಶಹಬ್ಬಾಸ್ ಗಿರಿ ಸಹ ದೊರೆತಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಶಿಂಧಿಹಟ್ಟಿ ಗ್ರಾಮದ ಮಹಿಳೆಯಾಗಿದ್ದು, ಹಿಡಕಲ್ ಡ್ಯಾಂನಿಂದ ಹಿರಣ್ಯಕೇಶಿ ಕಾರ್ಖಾನೆಯವರೆಗೆ 20 ಕೀಮಿ  ಟ್ರ್ಯಾಕ್ಟರ್ ಡ್ರೈವಿಂಗ್(Driving tractor) ಮಾಡಿದ್ದಾರೆ. ಯಾರದೆ ಸಹಾಯವಿಲ್ಲದೆ ಟ್ರ್ಯಾಕ್ಟರ್ ಚಲಾಯಿಸಿದ್ದು, ಮಹಾದೇವಿ ಟ್ರಾಕ್ಟರ್ ಡ್ರೈವಿಂಗ್ ಮಾಡುವ ವಿಡಿಯೋ ಫುಲ್ ವೈರಲ್ ಆಗಿದೆ.

ಇದನ್ನೂ ವೀಕ್ಷಿಸಿ:  ಧರ್ಮದ ನಾಡು ಧರ್ಮಸ್ಥಳದಲ್ಲಿ ಧರ್ಮ ಸಂರಕ್ಷಣಾ ರಥಯಾತ್ರೆ!