ರಾಜಕಾಲುವೆ ಒತ್ತವರಿ ಪತ್ತೆಗೆ BBMP ಹೊಸ ಪ್ಲಾನ್: BBMP ಮನವಿಗೆ ಸಾರ್ವಜನಿಕರ ಸಕತ್ ರೆಸ್ಪಾನ್ಸ್..!

Oct 3, 2023, 10:44 AM IST

ರಾಜಕಾಲುವೆ ಒತ್ತುವರಿಯಿಂದ ರಾಜಧಾನಿ ಮಾರ್ಯದೆ ಬೀದಿ ಪಾಲಗ್ತಿದೆ, ಮಳೆ ಬಂದ್ರೆ ಸಾಕು ರಾಜಕಾಲುವೆ(Rajakaluve) ನೀರು ರಸ್ತೆಗಳಲ್ಲಿ ಹಾರಿಯುತ್ತದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ರಾಜಕಾಲುವೇ ಒತ್ತುವರಿ ಗುರುತಿಸಿ ಪಾಲಿಕೆ ಅಧಿಕಾರಿಗಳ ಮೋಬೈಲ್ ಗೆ ಪೋಟೋ ಕಳುಹಿಸಿ ಅಂತ ಬಿಬಿಎಂಪಿ(BBMP) ಅಯುಕ್ತರು ಜನ್ರಲ್ಲಿ ಮಾನವಿ ಮಾಡಿದ್ರು, ಇತ್ತ ಮಾನವಿಗೆ ಸ್ವಂದಿಸಿದ ಜನ್ರು ನಗರದ ಹಲವು ಭಾಗಗಳಲ್ಲಿ ರಾಜಕಾಲುವೇ ಒತ್ತುವರಿ ಅಗಿರೋ ಬಗ್ಗೆ  ಪೋಟೋಗನ್ನೂ ಅಫ್ ಲೋಡ್ ಮಾಡಿದರೆ. ಇನ್ನೂ ರಾಜಕಾಲುವೆ ಒತ್ತುವರಿ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು ತಾವು ವಾಸಿಸುತ್ತಿರುವ ಸುತ್ತಮುತ್ತಲಿನ ಪ್ರದೇಶದಲ್ಲಿ ಒಟ್ಟು 144 ಕಡೆ ಹೊಸದಾಗಿ ರಾಜಕಾಲುವೆ ಒತ್ತುವರಿ ಆಗಿದೆ ಎಂದು ಫೋಟೋ(Photo) ತೆಗೆದು ಬಿಬಿಎಂಪಿ ಅಧಿಕಾರಿಗಳಿಗೆ ಕಳುಹಿಸಿದ್ದಾರೆ. ಸಾರ್ವಜನಿಕರು  ಕೊಟ್ಟ ಮಾಹಿತಿ ಪ್ರಕಾರರಾಜಕಾಲುವೆ ಒತ್ತುವರಿಯಲ್ಲಿ ಮಹದೇವಪುರ ನಂ.1 ಸ್ಥಾನ ಪಡೆದಿದೆ. ರಾಜಕಾಲುವೇ ವಿಚಾರವಾಗಿ ಹೈಕೋರ್ಟ್ ಪದೆ ಪದೇ ಸರ್ಕಾರ ಹಾಗೂ ಬಿಬಿಎಂಪಿ ಮೇಲೆ ಚಾಟಿ ಬೀಸುತ್ತಿದೆ. ಈಗ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಅಧಿಕಾರಿಗಳು ಈಗ ಸಾರ್ವಜನಿಕರು ಕಳುಹಿಸಿರೋ ಒತ್ತುವರಿ ತೆರವು ಮಾಡ್ತರಾ..? ಅಥವಾ ದೊಡ್ಡವರ ಒತ್ತಡಕ್ಕೆ ಮಣಿದು ಸುಮ್ಮನಾಗ್ತಾರಾ..? ಅನ್ನೋದು ಕಾದ್ದು ನೋಡಬೇಕಿದೆ.

ಇದನ್ನೂ ವೀಕ್ಷಿಸಿ:  ಬಿಡಿಎ ಯಡವಟ್ಟಿಗೆ ಸೈಟ್ ಮಾಲೀಕ ಕಂಗಾಲು: ಸೈಟ್ ಮಾರಲಾಗದೆ, ಮನೆ ಕಟ್ಟಲಾಗದೆ ಪರದಾಟ !