
ಬಳ್ಳಾರಿಯಲ್ಲಿ ಗಣಿಧಣಿ ರೆಡ್ಡಿ ಸಹೋದರರು ಮತ್ತು ನಾರಾ ಭರತ್ ರೆಡ್ಡಿ ಬಣದ ನಡುವಿನ ರಾಜಕೀಯ ದ್ವೇಷವು ಶೂಟೌಟ್ ಹಂತಕ್ಕೆ ತಲುಪಿದೆ. ಬ್ಯಾನರ್ ವಿಚಾರಕ್ಕೆ ಶುರುವಾದ ಈ ಸಂಘರ್ಷದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.
ಬೆಂಗಳೂರು (ಜ.5): ಬಳ್ಳಾರಿಯ ರಾಜಕೀಯ ಅಖಾಡ ಅಂದ್ರೆ ಅಲ್ಲಿ ಬರೀ ಮತಗಳ ಲೆಕ್ಕಾಚಾರ ಇರಲ್ಲ, ಬದಲಿಗೆ ರಕ್ತದ ವಾಸನೆ ಇರುತ್ತೆ. ಒಂದು ಕಡೆ ಗಣಿಧಣಿ ಗಾಲಿ ಜನಾರ್ದನ ರೆಡ್ಡಿ ಸಹೋದರರು, ಮತ್ತೊಂದು ಕಡೆ ನಾರಾ ಸೂರ್ಯನಾರಾಯಣ ರೆಡ್ಡಿ ಮತ್ತು ಭರತ್ ರೆಡ್ಡಿ ಜೋಡಿ.
ಬಳ್ಳಾರಿ ಈಗ 'ಗುಂಡು-ಗೂಂಡಾ'ಗಳ ರಿಪಬ್ಲಿಕ್: 'ಜನಾರ್ದನ ರೆಡ್ಡಿ ಕೊಲೆಗೆ ಸಂಚು ನಡೆದಿದೆ' ಆರ್. ಅಶೋಕ ಆರೋಪ
ಹಿಂದೆ ರೆಡ್ಡಿ ಬ್ರದರ್ಸ್ ವಿರುದ್ಧ ತೊಡೆ ತಟ್ಟಿ ನಿಂತಿದ್ದ ಬಳ್ಳಾರಿ ಕಟ್ಟಾಳು ಈ ಸೂರ್ಯನಾರಾಯಣ ರೆಡ್ಡಿ. ಇವರ ನಡುವಿನ ದ್ವೇಷ ಈಗ ಶೂಟೌಟ್ ಹಂತಕ್ಕೆ ಬಂದು ತಲುಪಿದೆ. ಸಣ್ಣದೊಂದು ಬ್ಯಾನರ್ ವಿಚಾರಕ್ಕೆ ಶುರುವಾದ ಕಿಡಿ, ಈಗ ಒಬ್ಬನ ಜೀವವನ್ನೇ ಬಲಿ ಪಡೆದಿದೆ.
ಬಳ್ಳಾರಿ ಈಗ ಬೂದಿ ಮುಚ್ಚಿದ ಕೆಂಡದಂತಿದೆ. ಈ ಹಲ್ಲೆ ಆಕಸ್ಮಿಕವೋ ಅಥವಾ ಮೊದಲೇ ಪ್ಲಾನ್ ಮಾಡಿದ್ದ ಸ್ಕೆಚ್ಚೋ? ಸಂಘರ್ಷದ ಹಿಂದೆ ಅಡಗಿರುವ ರಹಸ್ಯವೇನು? ಗಣಿನಾಡಿನ ಶೂಟೌಟ್ ಪ್ರಕರಣ ಈಗ ಹತ್ತಾರು ಅನುಮಾನಗಳಿಗೆ ಹಾದಿ ಮಾಡಿಕೊಟ್ಟಿದೆ. ಶೂಟೌಟ್ ನಡೆದಿದ್ದು ಯಾರ ಮೇಲೆ? ಸ್ವತಃ ಜನಾರ್ದನ ರೆಡ್ಡಿ ಅವರನ್ನೇ ಟಾರ್ಗೆಟ್ ಮಾಡಲಾಗಿತ್ತಾ? ಆದರೆ ಈ ಆರೋಪವನ್ನು ಶಾಸಕ ನಾರಾ ಭರತ್ ರೆಡ್ಡಿ ಕಟುವಾಗಿ ಅಲ್ಲಗಳೆದಿದ್ದಾರೆ.