ಬೆಂಗಳೂರು ಫೌಂಡೇಶನ್ ವತಿಯಿಂದ ಗೌರವ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ..ರಾಜ್ಯಪಾಲರಿಂದ ವಂದನೆ

Nov 5, 2023, 10:30 AM IST

ನಮ್ಮ ಬೆಂಗಳೂರು ಫೌಂಡೇಶನ್ ವತಿಯಿಂದ ಬೆಂಗಳೂರಿನ ಕೋರಮಂಗಲದ ಕ್ಲಬ್‌ನಲ್ಲಿ(Koramangala Club) ಪ್ರಶಸ್ತಿ ಸಮಾರಂಭ ಕಾರ್ಯಕ್ರಮ ನೆರೆವೇರಿತು. ಎಲೆಮರೆಯಲ್ಲಿರುವ ಬೆಂಗಳೂರಿನ(Bengaluru) ಸಾಧಕರನ್ನು ಗುರುತಿಸಿ ಪ್ರತಿವರ್ಷ ಬೆಂಗಳೂರು ಫೌಂಡೇಶನ್ ಪ್ರಶಸ್ತಿ(Bengaluru Foundation) ನೀಡುತ್ತಿದೆ. ಈ ವರ್ಷವೂ ಕೂಡ 800ಕ್ಕೂ ಹೆಚ್ಚಿನ ಸಾಧಕರ ನಾಮಿನೇಷನ್ ಪ್ರಕ್ರಿಯೆಯಲ್ಲಿ ಐದು ಜನ ಸಾಧಕರನ್ನ ಗುರುತಿಸಿ ಪ್ರಶಸ್ತಿ ನೀಡಲಾಯ್ತು. ನಮ್ಮ ಬೆಂಗಳೂರಿಯನ್ ಆಫ್ ದಿ ಇಯರ್ ಪ್ರಶಸ್ತಿಯನ್ನು ಅಲ್ಬಿನಾ ಶಂಕರ್ ಅವರಿಗೆ ನೀಡಲಾಗಿದೆ. ಉತ್ತಮ ಸರ್ಕಾರಿ ಅಧಿಕಾರಿ ಪ್ರಶಸ್ತಿ ಡಾ. ರಘುನಾಥ್ ಬಿ ವಿ ಅವರಿಗೆ ಲಭಿಸಿದೆ. ಸಾಮಾಜಿಕ ಉದ್ಯಮಿ ಪ್ರಶಸ್ತಿಯನ್ನು ಇಂದುಮತಿ ಅವರಿಗೆ ನೀಡಿ ಗೌರವಿಸಲಾಗಿದೆ. ರೈಸಿಂಗ್ ಸ್ಟಾರ್ ಪ್ರಶಸ್ತಿ(Award) ಅಂಕಿತ್ ಪುರಿ ಪಾಲಾದ್ರೆ ಜೀವಮಾನದ ಸಾಧನೆ ಪ್ರಶಸ್ತಿ ಯನ್ನು ಜಸ್ಟಿಸ್ ಡಾ.ವೆಂಕಟಾಚಲಯ್ಯ ಅವರಿಗೆ ನೀಡಲಾಗಿದೆ. ವಿವಿಧ ಕ್ಷೇತ್ರಗಳ ಗಣ್ಯರ ಒಳಗೊಂಡಂತೆ ತೀರ್ಪುಗಾರರ ಸಮಿತಿ ರಚಿಸಿ ಸಾಧಕರನ್ನ ಗುರುತಿಸಲಾಗಿದೆ. ಅಂತಿಮ ಸುತ್ತಲ್ಲಿ ಪ್ರತಿಯೊಬ್ಬ ಸಾಧಕರನ್ನೂ ಸಹ ಸಂದರ್ಶಿಸಿದ ಬಳಿಕ ಪಾರದರ್ಶಕ ಮತ್ತು ಸರ್ವಸಮ್ಮತದ ಪ್ರಕ್ರಿಯೆಯ ವಿಜೇತರನ್ನ ಆಯ್ಕೆ ಮಾಡಲಾಯ್ತು.. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿಜೇತರಿಗೆ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರದ ತಾವರ ಚಂದ್ ಗೇಹಲೊಟ್ ಪ್ರಶಸ್ತಿ ನೀಡಿ ಗೌರವಿಸಿದ್ರು.

ಇದನ್ನೂ ವೀಕ್ಷಿಸಿ:  ರಜನಿಕಾಂತ್‌ 171ನೇ ಚಿತ್ರಕ್ಕೆ ರಾಘವ ಲಾರೆನ್ಸ್ ವಿಲನ್..!