
ಸಿಲಿಕಾನ್ ಸಿಟಿಯಲ್ಲಿ ಆಟೋ ಚಾಲಕನೊಬ್ಬ ರ್‍ಯಾಶ್ ಆಗಿ ಡ್ರೈವಿಂಗ್ ಮಾಡಿ, ಬೈಕ್ ಹಾಗೂ ಪಾದಚಾರಿಗೆ ಗುದ್ದಿರುವ ಘಟನೆ ನಡೆದಿದೆ.
ಬೆಂಗಳೂರು: ಆಟೋ ಚಾಲಕನೊಬ್ಬ(Auto driver) ರ್‍ಯಾಶ್ ಆಗಿ ಡ್ರೈವಿಂಗ್ (Rash driving) ಮಾಡಿದ್ದು, ಬೈಕ್ ಹಾಗೂ ಪಾದಚಾರಿಗಳಿಗೆ ಗುದ್ದಿ ಎಸ್ಕೇಪ್ ಆಗಿದ್ದಾನೆ. ಹಿಟ್ ಆ್ಯಂಡ್ ರನ್ ದೃಶ್ಯ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಘಟನೆ ಡೈರಿ ಸರ್ಕಲ್ ಬಳಿಯ ಕ್ರೈಸ್ಟ್ ಯೂನಿವರ್ಸಿಟಿ ಬಳಿ ನಡೆದಿದೆ. ಜುಲೈ 11ರಂದು ರಾತ್ರಿ 9.07ರ ಸುಮಾರಿಗೆ ಘಟನೆ ನಡೆದಿದ್ದು, ಎಕ್ಸ್ ನಲ್ಲಿ ವಿಡಿಯೋ ಶೇರ್ ಮಾಡಿ ಬೆಂಗಳೂರು (Bengaluru)ಸಿಟಿ ಪೊಲೀಸರಿಗೆ ಟ್ಯಾಗ್ ಮಾಡಲಾಗಿದೆ. ಚಾಲಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ. ಮೊದಲು ವೇಗವಾಗಿ ಬಂದು ಕಾರನ್ನ ಓವರ್ ಟೇಕ್ ಮಾಡವ ಆಟೋ, ನಂತರ ರಸ್ತೆ ಬದಿ ನಡೆದುಕೊಂಡು ಹೋಗ್ತಿದ್ದ ಇಬ್ಬರು ಪಾದಚಾರಿ ಹಾಗೂ ಬೈಕ್‌ಗೆ ಗುದ್ದಿ ಪರಾರಿಯಾಗಿದ್ದಾನೆ. ತಕ್ಷಣ ಬಿದ್ದವರ ಸಹಾಯಕ್ಕೆ ಸಹ ಸವಾರರು ಬಂದಿದ್ದಾರೆ. ವಿಡಿಯೋದಲ್ಲಿ ಆಟೋದ ನಂಬರ್ ಫ್ಲೇಟ್ ಸರಿಯಾಗಿ ಸೆರೆಯಾಗಿಲ್ಲ. ಸೂಕ್ತ ಕ್ರಮದ ಭರವಸೆಯನ್ನು ಬೆಂಗಳೂರ ಸಿಟಿ ಪೊಲೀಸರು ನೀಡಿದ್ದಾರೆ.
ಇದನ್ನೂ ವೀಕ್ಷಿಸಿ: ಮನವಿ ಪತ್ರ ಕಸದ ಪಾಲು! ಸಿಎಂ ಸ್ವೀಕರಿಸಿದ್ದ ಅಹವಾಲು ಕಸದ ರಾಶಿಯಲ್ಲಿ ಪತ್ತೆ !