Uttara kannada: ದೇಶದಲ್ಲೇ ಮೊದಲ ಬಾರಿಗೆ ಸಾರ್ವಜನಿಕರಿಗಾಗಿ ವೈಫೈ-7 ಪ್ರಾರಂಭ: ಭಾರತ್ ಏರ್‌ ಫೈ ನೂತನ ಸಂಪರ್ಕ ಸೇವೆ

Uttara kannada: ದೇಶದಲ್ಲೇ ಮೊದಲ ಬಾರಿಗೆ ಸಾರ್ವಜನಿಕರಿಗಾಗಿ ವೈಫೈ-7 ಪ್ರಾರಂಭ: ಭಾರತ್ ಏರ್‌ ಫೈ ನೂತನ ಸಂಪರ್ಕ ಸೇವೆ

Published : Mar 09, 2024, 05:30 PM ISTUpdated : Mar 09, 2024, 05:31 PM IST

ದೇಶದಲ್ಲೇ ಮೊದಲ ಬಾರಿಗೆ ಸಾರ್ವಜನಿಕರಿಗಾಗಿ ವೈಫೈ-7 ಸೇವೆಯನ್ನು ಕುಮಟಾದ ಯಾಣದಲ್ಲಿ ಪ್ರಾರಂಭ ಮಾಡಲಾಗಿದೆ.
 

ಉತ್ತರಕನ್ನಡ: ಪ್ರವಾಸೋದ್ಯಮ ಉತ್ತೇಜಿಸಲು ಉತ್ತರಕನ್ನಡ(Uttara Kannada) ಜಿಲ್ಲೆಯಲ್ಲಿ ವೈಫೈ -7 ಸೇವೆ(Wi-Fi-7 service) ಪ್ರಾರಂಭ ಮಾಡಲಾಗಿದೆ. ದೇಶದಲ್ಲೇ ಮೊದಲ ಬಾರಿಗೆ ಸಾರ್ವಜನಿಕರಿಗಾಗಿ ವೈಫೈ-7 ಸೇವೆಯನ್ನು ಕುಮಟಾದ ಯಾಣದಲ್ಲಿ ಪ್ರಾರಂಭ ಮಾಡಲಾಗಿದೆ. ಇನ್ಮುಂದೆ ದಟ್ಟ ಕಾಡಿನ ಒಳಗಿರುವ ಯಾಣ ಕ್ಷೇತ್ರದಲ್ಲಿ  ಅತ್ಯುತ್ತಮ ಹೈ ಸ್ಪೀಟ್ ಇಂಟರ್‌ನೆಟ್(Internet) ಸೇವೆ ದೊರೆಯಲಿದೆ. ಬಿಎಸ್‌ಎನ್‌ಎಲ್ ಹಾಗೂ ಜಿಎನ್‌ಎ ಕಂಪೆನಿ ಸಹಯೋಗದಲ್ಲಿ ಭಾರತ್ ಏರ್‌ ಫೈ ನೂತನ ಸಂಪರ್ಕ  ಸೇವೆ ಆರಂಭಿಸಿದೆ. ಜಪಾನೀಸ್ ತಂತ್ರಜ್ಞಾನವನ್ನು ಬಳಸಿಕೊಂಡು ಜನರಿಗಾಗಿ ವೈಫೈ ಸೇವೆ ಒದಗಿಸಲಾಗುತ್ತಿದೆ. ಸ್ವಂತ ಮುತುವರ್ಜಿ ವಹಿಸಿಕೊಂಡು  ದೇಶದಲ್ಲೇ ಮೊದಲ ಬಾರಿಗೆ ಯಾಣದಲ್ಲಿ ವೈಫೈ -7 ಸೇವೆಯನ್ನು ಸಂಸದ ಅನಂತ ಕುಮಾರ್ ಹೆಗಡೆ ಕಾರ್ಯರೂಪಕ್ಕೆ ತರಿಸಿದ್ದಾರೆ. ವೈಫೈ-7 ಭಾರತ್ ಏರ್ ಫೈ ಸೇವೆಗೆ ಸಂಸದ ಅನಂತ ಕುಮಾರ್ ಹೆಗಡೆ(AnantKumar Hegde) ಚಾಲನೆ ನೀಡಿದರು. ಶ್ರೀ ಗಂಗಾ, ಚಂಡಿಕಾ, ಭೈರವೇಶ್ವರ ದೇವರ ದರ್ಶನ, ಪ್ರಪಂಚದ ಅದ್ಭುತ ಯಾಣ ಗುಹೆ, ಪ್ರಕೃತಿ ಸೌಂದರ್ಯ ಕ್ಷಣಮಾತ್ರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಸಾಧ್ಯವಾಗಲಿದೆ. ಕ್ಯೂಆರ್ ಕೋಡ್ ಮೂಲಕ ಪ್ಯಾಕೇಜ್ ಖರೀದಿಸಿ ವೈಫೈ ಸೇವೆ ಬಳಸಲು ವ್ಯವಸ್ಥೆ ಮಾಡಲಾಗಿದೆ.

35 ನಿಮಿಷ, 65 ನಿಮಿಷ ಹಾಗೂ ಒಂದು ಪೂರ್ಣ ದಿನದ ವೈಫೈ ಸೇವೆಯನ್ನು ವಿವಿಧ ದರದಲ್ಲಿ ಕೇವಲ 100ರೂ. ಒಳಗೆ ಪಡೆಯಲು ಅವಕಾಶ ನೀಡಲಾಗಿದೆ. ಪ್ರವಾಸಿಗರಿಗೆ ಕ್ಷೇತ್ರದಿಂದ ಒಂದು ಕಿ.ಮೀ. ರೇಂಜ್ ವ್ಯಾಪ್ತಿಯವರೆಗೆ ಉತ್ತಮ ವೈಫೈ ಸೇವೆ ದೊರೆಯಲಿದೆ. ದಟ್ಟ ಕಾಡಿನಿಂದ ಆವರಿಸಿರುವ ಯಾಣದಲ್ಲಿ ಈ ಹಿಂದೆ ಕಿ.ಮೀ.ಗಟ್ಟಲೇ ಇಂಟರ್‌ನೆಟ್ ದೊರೆಯುತ್ತಿರಲಿಲ್ಲ. ಉತ್ತಮ ಕ್ಷಣಗಳನ್ನು ಶೇರ್ ಮಾಡಲು, ಯಾವುದೇ ಸಮಸ್ಯೆಗಳಾದ್ರೂ ಯಾರನ್ನೂ ಸಂಪರ್ಕಿಸಲಾಗ್ತಿರ್ಲಿಲ್ಲ. ಆದ್ರೆ, ನೂತನ ಹೈ ಸ್ಪೀಡ್ ವೈಫೈನೊಂದಿಗೆ ಕ್ಷಣ ಮಾತ್ರದಲ್ಲಿ ಎಲ್ಲಾ ಕೆಲಸಗಳು ಮಾಡಲು ಸಾಧ್ಯವಾಗಲಿದೆ. ಸದ್ಯಕ್ಕೆ ವೈಫೈ-6 ನೀಡಿ  2-3  ತಿಂಗಳಲ್ಲಿ ವೈಫೈ-7 ಸೇವೆಯೂ ಜನರು ಪಡೆಯಲು ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ವೀಕ್ಷಿಸಿ:  ನನಗೆ ಲೋಕಸಭೆ ಟಿಕೆಟ್ ನೀಡದಿದ್ದರೆ ನೋವಾಗುತ್ತೆ, ಹೊಸ ಪ್ರಯೋಗ ಮಾಡಬೇಡಿ: ಡಿ.ವಿ.ಸದಾನಂದಗೌಡ

48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
Read more