ಕೊಲ್ಲೂರಿಗೆ ಕೇರಳ ಭಕ್ತರ ಆಗಮನ.. ಜನರಲ್ಲಿ ಆತಂಕ: ಆಫ್ರಿಕನ್ ಫೀವರ್ ಬಾಧಿಸುವ ಭೀತಿ !

Sep 1, 2023, 10:57 AM IST

ಕರಾವಳಿ ಜಿಲ್ಲೆ ಉಡುಪಿಯಲ್ಲಿ ಒಂದರ ಹಿಂದೊಂದರಂತೆ ಸಾಂಕ್ರಾಮಿಕ ಜ್ವರದ ಭೀತಿ ಜನರನ್ನು ಕಾಡುತ್ತಿದೆ. ಈಗಾಗಲೇ ಮಲೇರಿಯಾ ಹಾಗೂ ಡೆಂಘೀ ಜ್ವರ ಆವರಿಸಿಕೊಂಡಿದೆ. ಇದೀಗ ಉಡುಪಿ(Udupi) ಜೊತೆ ಗಡಿ ಹಂಚಿಕೊಂಡ ಕೇರಳದಲ್ಲಿ(Kerala) ಕಾಣಿಸಿಕೊಂಡಿರುವ ಹಂದಿ ಜ್ವರ (Swine Flu) ಅಥವಾ ಆಫ್ರಿಕನ್ ಫ್ಲೂ(African swine fever virus) ಉಡುಪಿಗೂ ವಕ್ಕರಿಸುವ ಆತಂಕ ಕಾಡುತ್ತಿದೆ. ಓಣಂ ಹಬ್ಬದ ಪ್ರಯುಕ್ತ ಕೇರಳದಲ್ಲಿ ಈಗ ಸರ್ಕಾರಿ ರಜೆ ಘೋಷಿಸಲಾಗಿದೆ. ಹೀಗಾಗಿ ನಿತ್ಯ ನೂರಾರು ಭಕ್ತರು ಕೊಲ್ಲೂರಿನ ಮುಕಾಂಬಿಕಾ ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ಹೀಗೆ ಬಂದವರ ಮೂಲಕ ರೋಗ ಹರಡಬಹುದು ಅನ್ನೋ ಭೀತಿ ಜನರನ್ನ ಕಾಡುತ್ತಿದೆ.ಕೇರಳದಲ್ಲಿ ಕೇವಲ ಹಂದಿಗಳಲ್ಲಿ ಮಾತ್ರ ಆಫ್ರಿಕನ್ ಫೀವರ್ ಕಾಣಿಸಿಕೊಂಡಿದೆ. ಈವರೆಗೆ ಯಾವುದೇ ನಾಗರಿಕರಿಗೆ ಜ್ವರ ಬಂದಿಲ್ಲ. ಈ ಜ್ವರ ಮನುಷ್ಯರಿಗೆ ಹಬ್ಬುವುದಿಲ್ಲ ಅಂತಾ ಕೇರಳದ ಪಶುಸಂಗೋಪನ ಇಲಾಖೆ ಸ್ಪಷ್ಟಪಡಿಸಿದೆ. ಹಾಗಾಗಿ ಆತಂಕ ಪಡುವ ಅಗತ್ಯವಿಲ್ಲ ಅಂತಾರೆ ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಪ್ರಶಾಂತ್ ಭಟ್. ಆಫ್ರಿಕನ್ ಫೀವರ್ ಬಗ್ಗೆ ಉಡುಪಿ ಜನ ಆತಂಕದಲ್ಲಿದ್ದಾರೆ. ಆದ್ರೆ ಯಾರು ಭಯಪಡುವ ಅಗತ್ಯವಿಲ್ಲ. ಕೇರಳ ಭಾಗದಿಂದ ಬರುವವರಲ್ಲಿ ಜ್ವರದ ಲಕ್ಷಣಗಳು ಕಂಡುಬಂದ್ರೆ ಜ್ವರ ಪತ್ತೆ ಹಚ್ಚಲು ಆರೋಗ್ಯ ಇಲಾಖೆ ಸಜ್ಜಾಗಿದೆ ಎನ್ನುತ್ತಿದ್ದಾರೆ ಆರೋಗ್ಯಾಧಿಕಾರಿ ಡಾ. ಪ್ರಶಾಂತ ಭಟ್.

ಇದನ್ನೂ ವೀಕ್ಷಿಸಿ:  ರಾಘವೇಂದ್ರ ಸ್ವಾಮಿ 352ನೇ ಆರಾಧನೆ ಮಹೋತ್ಸವ: ಮಂತ್ರಾಲಯದಲ್ಲಿ ರಾಯರ ಭಕ್ತರ ಸಂಭ್ರಮವೋ ಸಂಭ್ರಮ