Suraj Revanna: ಇದೇನಿದು ರೇವಣ್ಣ ಫ್ಯಾಮಿಲಿಗೆ ಸ್ತ್ರೀ..ಪುರುಷ ಕಂಟಕ..? ಕಾನೂನು ಕುಣಿಕೆಯಲ್ಲಿ ಸಿಲುಕಿದ ರೇವಣ್ಣ ಫ್ಯಾಮಿಲಿ..!

Jun 24, 2024, 4:32 PM IST

ಮಾಜಿ ಸಚಿವ ಹೆಚ್‌.ಡಿ. ರೇವಣ್ಣ(HD revanna) ಅವರ ಕುಟುಂಬಕ್ಕೆ ಒಂದಲ್ಲ ಒಂದು ಸಂಕಷ್ಟ ಸುತ್ತಿಕೊಳ್ಳುತ್ತಿವೆ. ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಕಿರಿ ಮಗ ಪ್ರಜ್ವಲ್ ರೇವಣ್ಣ(Prajwal Revanna) ಹಲವು ದಿನಗಳಿಂದ ಜೈಲಿನಲ್ಲಿದ್ದಾರೆ. ಇನ್ನು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯ ಕಿಡ್ನ್ಯಾಪ್ ಕೇಸ್‌ನಲ್ಲಿ ಹೆಚ್‌ ಡಿ ರೇವಣ್ಣ ಅವರ ಬಂಧನವಾಗಿ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ. ಇದೇ ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣ ಅವರು ಕೂಡ ಜಾಮೀನಿನ ಮೇಲೆ ಹೊರಗಿದ್ದಾರೆ. ಇದೀಗ ರೇವಣ್ಣ ಕುಟುಂಬದ ಹಿರಿಯ ಪುತ್ರ, ಜೆಡಿಎಸ್ ವಿಧಾನಪರಿಷತ್ ಸದಸ್ಯ ಸೂರಜ್‌ ರೇವಣ್ಣ(Suraj Revanna) ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ(Abnormal sexual assault case) ಬಂಧನವಾಗಿದ್ದು, ಕೇಸ್ ಸಿಐಡಿಗೆ(CID) ವರ್ಗಾವಣೆಯಾಗಿದೆ. ರೇವಣ್ಣ ಕುಟುಂಬಕ್ಕೆ ಒಂದಿಲ್ಲೊಂದು ಕಂಟಕ ಎದುರಾಗ್ತಾನೆ ಇದೆ. ಅವತ್ತು ಸ್ತ್ರೀ ಕಂಟಕ.. ಇವತ್ತು ಪುರುಷ ಕಂಟಕ. ಇಬ್ಬರು ಮಕ್ಕಳಿಂದ ತಂದೆ ತಾಯಿಗೆ ಸಂಕಷ್ಟ. ಪ್ರಜ್ವಲ್ ರೇವಣ್ಣನ ಪೆನ್ ಡ್ರೈವ್ ಪ್ರಕರಣದ ಚಕ್ರವ್ಯೂಹದಲ್ಲಿ ಇಡೀ ರೇವಣ್ಣ ಕುಟುಂಬವೇ ಸಿಲುಕಿಕೊಡಿದೆ. ಈ ಮಧ್ಯೆ ಮನೆಯ ಹಿರಿಮಗನೂ ಅಸಹಜ ಲೈಂಗಿಕ ದೌರ್ಜನ್ಯದ ಕೇಸ್‌ನಲ್ಲಿ ಅರೆಸ್ಟ್ ಆಗಿದ್ದಾರೆ. ಆ ಮೂಲಕ ಇಡೀ ಕುಟುಂಬ ಇದೀಗ ಕಾನೂನು ಸಂಕಷ್ಟ ಎದುರಿಸುವಂತಾಗಿದೆ.

ಇದನ್ನೂ ವೀಕ್ಷಿಸಿ:  Farmers protest: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತರ ಪ್ರತಿಭಟನೆ: ಮೈಮೇಲೆ ಸಗಣಿ ಸುರಿದುಕೊಂಡು ಆಕ್ರೋಶ