ಬೆಂಗಳೂರಿನಲ್ಲಿ ಬಲಿ ಪಡೆಯಲು ಕಾಯ್ತಿದೆ 11,361 ರಸ್ತೆ ಗುಂಡಿಗಳು !

Oct 19, 2023, 11:35 AM IST

ಬ್ರ್ಯಾಂಡ್ ಬೆಂಗಳೂರು ನಿರ್ಮಾಣ ಮಾಡೋ ಕನಸನ್ನ ಡಿಸಿಎಂ ಡಿಕೆ ಶಿವಕುಮಾರ್(DK Shivakumar) ಕನಸು ಕಾಣ್ತಾ ಇದ್ದಾರೆ. ಆದ್ರೆ ಒಂದೇ ಒಂದು ಮಳೆಗೆ  ಕೋಟಿ ಕೋಟಿ ಸುರಿದು ಮುಚ್ಚಿದ ರಸ್ತೆ ಗುಂಡಿಗಳು ಬಣ್ಣ ಬಯಲಾಗ್ತಿದೆ. ಈಗ ಮತ್ತೆ ರಸ್ತೆ ಗುಂಡಿಗಳ‌ ಅವಾಂತರ ಜಾಸ್ತಿ ಆಗಿದ್ದು ರಸ್ತೆ ಗುಂಡಿ ಮುಚ್ಚೋದಕ್ಕೆ ಬಿಬಿಎಂಪಿ(BBMP) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್  ವಲಯ ಆಯುಕ್ತರುಗಳಿಗೆ ನವೆಂಬರ್ 30ರ ಒಳಗಡೆ ಮೇಜರ್ ರಸ್ತೆಗುಂಡಿಗಳನ್ನ ಮುಚ್ಚುವಂತೆ ಸೂಚಿಸಿದ್ದಾರೆ. ಈಗಾಲೇ ಡಿಸಿಎಂ ಡಿಕೆ ಶಿವಕುಮಾರ್ ಅವರು ಕೂಡ ನವೆಂಬರ್ 30 ರ ಒಳಗಡೆ ರಸ್ತೆ ಗುಂಡಿ(road potholes) ಮುಚ್ಚಬೇಕು ಅಂತಾ ಹೇಳಿದ್ದಾರೆ.‌ 11,361 ಗುಂಡಿಗಳನ್ನ ಗುರುತಿಸಿದ್ದು ಅವುಗಳನ್ನು ಮುಚ್ಚಬೇಕಾಗಿದೆ‌.ಬೊಮ್ಮನಹಳ್ಳಿ ವಲಯದಲ್ಲಿ  319 ರಸ್ತೆ ಗುಂಡಿ ಮುಚ್ಚಬೇಕಿದೆ, ದಾಸರಹಳ್ಳಿ ವಲಯದಲ್ಲಿ  1317 ಗುಂಡಿ ಮುಚ್ಚಬೇಕಿದೆ, ಪೂರ್ವ ವಲಯ್ಲಗಲಿ 1646, ಮಹಾದೇವಪುರ ವಲಯದಲ್ಲಿ 595, ಆರ್ಆರ್ ನಗರ ವಲಯದಲ್ಲಿ 845, ದಕ್ಷಿಣ ವಲಯದಲ್ಲಿ 401, ಪಶ್ಚಿಮ ವಲಯದಲ್ಲಿ  422, ಯಲಹಂಕ ವಲಯದಲ್ಲಿ 423ಗುಂಡಿ ಮುಚ್ಚಬೇಕಿದೆ.ಗುಂಡಿ ಗಂಡಾಂತರದಿಂದ ಬೆಂಗಳೂರಿನ ವಾಹನ‌ ಸವಾರರು ಬೇಸತ್ತು ಹೋಗಿದ್ದು ಸರ್ಕಾರಕ್ಕೆ  ಹಿಡಿಶಾಪ ಹಾಕುತ್ತಿದ್ದಾರೆ.

ಇದನ್ನೂ ವೀಕ್ಷಿಸಿ:  ಕರಾವಳಿಯಲ್ಲಿ ಮತ್ತೊಂದು ಚಂಡಮಾರುತ ಭೀತಿ: ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ