ಬಿಜೆಪಿ ಲೀಡರ್ ಮನೆಗೂ ನುಗ್ಗಿತು ಯೋಗಿ ಬುಲ್ಡೋಜರ್..!

ಬಿಜೆಪಿ ಲೀಡರ್ ಮನೆಗೂ ನುಗ್ಗಿತು ಯೋಗಿ ಬುಲ್ಡೋಜರ್..!

Published : Aug 09, 2022, 10:01 PM IST

ಮಹಿಳೆಯೊಬ್ಬಳನ್ನು ಹಲ್ಲೆ ಮಾಡಿ ನಿಂದನೆ ನಡೆಸಿದ ಆರೋಪದ ಮೇಲೆ ಸ್ವಯಂ ಘೋಷಿತ ಬಿಜೆಪಿ ನಾಯಕ ಶ್ರೀಕಾಂತ್ ತ್ಯಾಗಿ ಮನೆ ಮೇಲೆ ಬುಲ್ಡೋಜರ್ ದಾಳಿ ನಡೆಸಲಾಗಿದೆ.

ಲಕ್ನೋ: ಉತ್ತರಪ್ರದೇಶದಲ್ಲಿ ಯಾರಾದರೂ ಬಾಲ ಬಿಚ್ಚಿದ್ರೆ, ಕಲ್ಲು ತೂರಾಟ, ಗೂಂಡಾಗರಿ ನಡೆಸಿದರೆ ಯೋಗಿ ಸರ್ಕಾರ ಅವರ ಮನೆ ಮೇಲೆ ಬುಲ್ಡೋಜರ್‌ ಹತ್ತಿಸುತ್ತೆ. ಅದು ಎಂತಹ ನಾಯಕನೇ ಆಗಿರಬಹುದು ಹಿಂದೂ ಮುಂದೆ ನೋಡದೇ ಅಕ್ರಮವೆಸಗುವವರ ವಿರುದ್ಧ ಕ್ರಮ ಕೈಗೊಳ್ಳುವ ಯೋಗಿ ಸರ್ಕಾರ ಭ್ರಷ್ಟರ ಪಾಲಿಗೆ ಸಿಂಹಸ್ವಪ್ನವಾಗಿದ್ದಾರೆ. ಯೋಗಿ ಸರ್ಕಾರದ ಹೊಸ ಕಾನೂನು ಆ ರೀತಿ ಇದೆ. ಹಾಗೆಯೇ ಈಗ ನೋಯ್ಡಾ ಸೆಕ್ಟರ್ 93 ಬಿಯಲ್ಲಿ ಗ್ರಾಂಡ್‌ ಒಮೆಕ್ಸ್‌ ಸೊಸೈಟಿಯ ನಿವಾಸಿಯ ಮಹಿಳೆಯೊಬ್ಬಳನ್ನು ಹಲ್ಲೆ ಮಾಡಿ ನಿಂದನೆ ನಡೆಸಿದ ಆರೋಪದ ಮೇಲೆ ಸ್ವಯಂ ಘೋಷಿತ ಬಿಜೆಪಿ ನಾಯಕ ಶ್ರೀಕಾಂತ್ ತ್ಯಾಗಿ ಮನೆ ಮೇಲೆ ಬುಲ್ಡೋಜರ್ ದಾಳಿ ನಡೆಸಲಾಗಿದೆ. ಮರಗಳನ್ನು ನೆಡುವ ಬಗ್ಗೆ ಮಹಿಳೆ ಹಾಗೂ ಶ್ರೀಕಾಂತ್ ತ್ಯಾಗಿ ಮಧ್ಯೆ ವಾಗ್ವಾದ ಉಂಟಾಗಿ ಶ್ರೀಕಾಂತ್ ಮಹಿಳೆ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಶ್ರೀಕಾಂತ್ ವಿರುದ್ಧ ಐಪಿಸಿ ಸೆಕ್ಷನ್‌ ಅಡಿ ಪ್ರಕರಣ ದಾಖಲಿಸಲಾಗಿತ್ತು. ಈಗ ಬುಲ್ಡೋಜರ್ ದಾಳಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಮ್ಮ ರಾಜ್ಯದಲ್ಲೂ ಅಂತ ಕಾನೂ ಬರಲಿ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. 
 

22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
23:42ಭರತ ಭೂಮಿಯ ಮೇಲೆ ಕೋಪಿಸಿಕೊಂಡನಾ ಭಾಸ್ಕರ..? ನೆತ್ತಿ ಸುಡುವ ಸೂರ್ಯ ಬೆಳಕು ಚೆಲ್ಲುತ್ತಿಲ್ಲವೇಕೆ..?
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
20:56ಮೂರು ದಶಕದ ಬಳಿಕ ಗಾಂಧಿ ಕುಟುಂಬದಲ್ಲಿ ಮದುವೆ ಸಂಭ್ರಮ: ರೈಹಾನ್ ವಾದ್ರಾ–ಅವಿವಾ ಬೇಗ್ ಲವ್ ಸ್ಟೋರಿ
23:19Bullet Train: ಸಮುದ್ರದಡಿ 7 ಕಿ.ಮೀ ಸುರಂಗ, ದೇಶದ ಮೊದಲ ಅದ್ಭುತ! ಬಂದ ಬಂದ ಬುಲೆಟ್‌ ಬಾಬಾ!
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
Read more