ಬಂಗಾಳದ (West Bengal( ಉರುಳಿಯಾ ನಿಲ್ದಾಣದಲ್ಲಿ ಚಲಿಸುತ್ತಿರುವ ರೈಲಿನಿಂದ (Railway) ಮಹಿಳೆಯರು ಕೆಳಗೆ ಬಿದ್ದಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರೈಲು (Railway) ಹತ್ತುವಾಗ, ಇಳಿಯುವಾಗ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಚೂರು ಆಯ ತಪ್ಪಿದರೂ ಅಪಾಯ ಖಂಡಿತ. ಆಯತಪ್ಪಿ ಕೆಳಗೆ ಬಿದ್ದು, ಅನಾಹುತ ಮಾಡಿಕೊಳ್ಳುವುದನ್ನು ನೋಡುತ್ತೇವೆ.
ಬಂಗಾಳದ (West Bengal) ಉರುಳಿಯಾ ನಿಲ್ದಾಣದಲ್ಲಿ ಚಲಿಸುತ್ತಿರುವ ರೈಲಿನಿಂದ (Railway) ಮಹಿಳೆಯರು ಕೆಳಗೆ ಬಿದ್ದಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಮಹಿಳೆಯರು ರೈಲಿನಿಂದ ಇಳಿಯಬೇಕಿತ್ತು. ಅಷ್ಟೊತ್ತಿಗಾಗಲೇ ರೈಲು ಚಲಿಸಿದ್ದು, ಧಾವಂತದಲ್ಲಿ ಇಳಿಯಲು ಹೋಗಿ ಬಿದ್ದಿದ್ದಾರೆ. ಕೂಡಲೇ ಅಲ್ಲಿಯೇ ಇದ್ದ ಸಿಬ್ಬಂದಿಗಳು ಓಡಿ ಬಂದು ಪ್ರಾಣ ಉಳಿಸಿದ್ಧಾರೆ.