Dec 4, 2024, 3:00 PM IST
ಸಿಖ್ಖರ ಪರಮೋಚ್ಚ ಧಾರ್ಮಿಕ ನ್ಯಾಯ ಮಂಡಳಿ ‘ಅಕಾಲ್ ತಖ್ತ್’ ಮಾಜಿ ಡಿಸಿಎಂ ಸುಖಬೀರ್ ಸಿಂಗ್ ಬಾದಲ್ ಅವರಿಗೆ ಶಿಕ್ಷೆಯನ್ನು ವಿಧಿಸಿದೆ. ಪಂಜಾಬ್ನ ಮಾಜಿ ಡಿಸಿಎಂಗೆ ಈ 'ಅಕಾಲ್ ತಖ್ತ್ ವಿಧಿಸಿದ ಶಿಕ್ಷೆ ಏನ್ ಗೊತ್ತಾ? ಟಾಯ್ಲೆಟ್ ಕ್ಲೀನ್ ಮಾಡುವುದು, ಭಕ್ತರ ಚಪ್ಪಲಿಗಳನ್ನು ಪಾಲಿಶ್ ಮಾಡುವುದು ಮತ್ತು ಭಕ್ತರರು ಪ್ರಸಾದ ಸ್ವೀಕರಿಸಿದ ಎಂಜಲು ತಟ್ಟಯನ್ನು ತೊಳೆಯುವುದು. ಅಕಾಲ್ ತಖ್ತ್ ನೀಡಿದ ಈ ಶಿಕ್ಷೆಯನ್ನು ಸುಖಬೀರ್ ಸಿಂಗ್ ಬಾದಲ್ ತಲೆಬಾಗಿ ಸ್ವಾಗತಿಸಿದ್ದಾರೆ. ಹಾಗೆನೇ ತಮ್ಮಿಂದಾದ ತಪ್ಪಿಗೆ ತಮ್ಮ ಧರ್ಮದ ನ್ಯಾಯ ಮಂಡಳಿ ಮುಖ್ಯಸ್ಥರಿಗೆ ಕ್ಷಮೆಯನ್ನೂ ಕೇಳಿದ್ದಾರೆ. ಹಾಗಿದ್ರೆ ಒಬ್ಬ ಮಾಜಿ ಡಿಸಿಎಂಗೆ ಇಂತಹದ್ದೊಂದು ಶಿಕ್ಷೆ ವಿಧಿಸಿದ್ದು ಏಕೆ? ಇದಕ್ಕೆ ಪ್ರಮುಖ ಕಾರಣವೇನು ಅನ್ನೋದರ ಕುರಿತು ಈ ವಿಶೇಷ ಕಾರ್ಯಕ್ರಮದಲ್ಲಿ ನೋಡೋಣ.