Dec 28, 2024, 9:43 AM IST
ಮಹಾಮೌನಿ ಸಾಧಕನಿಗೆ ಎದುರಾಗಿದ್ದ ಅವಮಾನ ಎಂಥದ್ದು..? ಅಪಮಾನಗಳನ್ನು ಹಲ್ಲುಕಚ್ಚಿ ನುಂಗಿದ್ದರಾ ತಿಪ್ರಿಯ..? ಆರ್ಥಿಕ ತಜ್ಞ.. ಮಹಾ ಮೇಧಾವಿ.. ಸಿಂಗ್ ಈಸ್ ಕಿಂಗ್..! ಇದೆಲ್ಲವನ್ನು ನೋಡೋದೇ ಈ ಕ್ಷಣದ ವಿಶೇಷ ಮನಮೋಹನ ಮೌನ ಸಂಗ್ರಾಮ. ಮಾಜಿ ಪ್ರಧಾನಿ, ಆರ್ಥಿಕ ತಜ್ಞ ಡಾ. ಮನಮೋಹನ್ ಸಿಂಗ್ ವಿಧಿವಶವಾಗಿದ್ದಾರೆ. ಡಾ. ಮನಮೋಹನ್ ಸಿಂಗ್ ಭಾರತದ ಪ್ರಧಾನಿಯಾಗಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅವರು ನಿನ್ನೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ವಯೋ ಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಅವರ ಅಗಲಿಕೆಗೆ ದೇಶವೇ ಮರಗುತ್ತಿದೆ. ಈ ಮಧ್ಯೆ ಅವರು ಪಿಎಂ ಆಗಿದ್ದಾಗಿನ ಕೆಲವು ವಿಡಿಯೋಗಳು ಸೋಷಿಯಲ್ ಮೀಡಿಗಾಲ್ಲಿ ವೈರಲ್ ಆಗುತ್ತಿವೆ.
ಇಷ್ಟೊಂದು ಶಾಂತ ಸ್ವಭಾವದ ಪ್ರಧಾನಿ ಮೇಲೂ ಹತ್ತಾರು ಆರೋಪಗಳು ಕೇಳಿ ಬಂದಿದ್ದವು. ಆದ್ರೆ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ತಾವಾಯ್ತು ತಮ್ಮ ಕೆಲಸವಾಯ್ತು ಎಂದು ದೇಶಕ್ಕಾಗಿ ಸೇವೆ ಸಲ್ಲಿಸಿದವರು ಡಾ. ಮನಮೋಹನ್ ಸಿಂಗ್. ಮನಮೋಹನ್ ಸಿಂಗ್ ಅವರ ಕುರಿತು ಇನ್ನು ಕೆಲವೊಂದಿಷ್ಟು ಇಂಟ್ರಸ್ಟಿಂಗ್ ಸ್ಟೋರಿಗಳಿವೆ. ಮನಮೋಹನ್ ಸಿಂಗ್ ದೇಶದ ಪ್ರಧಾನಿಯಾಗಿದ್ದಾಗ ಕೆಲ ವಿಶೇಷ ಸಾಧನೆಗಳನ್ನು ಮಾಡಿದ್ದಾರೆ. ಜಾಗತಿಕ ಮಟ್ಟದಲ್ಲಿ ದೇಶದ ದೃಷ್ಟಿಯಲ್ಲಿ ಬದಲಿಸುವ ಪ್ರಯತ್ನ ಮಾಡಿದ್ದಾರೆ. ಹಾಗೆನೇ ಭಾರತ ದೇಶದ ಪ್ರಧಾನಿಯಾಗಿದ್ದಾಗ ಪ್ರಮುಖ ದೇಶಗಳ ನಾಯಕರ ಮೆಚ್ಚುಗೆಯನ್ನು ಪಡೆದ ಹೆಗ್ಗಳಿಗೆ ಪ್ರಧಾನಿ ಮನಮೋಹನ್ ಸಿಂಗ್ ಅವರದ್ದು.
ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ತಮ್ಮ ಆತ್ಮಚರಿತ್ರೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕುರಿತು ತುಂಬಾ ಚೆನ್ನಾಗಿ ಬರೆದುಕೊಂಡಿದ್ದಾರೆ. ಅದನ್ನು ನಾವೆಲ್ಲ ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳದಿದ್ದರೆ ಹೇಗೆ? ಇನ್ನು ಮನಮೋಹನ್ ಸಿಂಗ್ ಕುಟುಂಬ ಕುರಿತು ಹೆಚ್ಚಿನವರಿಗೆ ಅಷ್ಟೊಂದು ಗೊತ್ತಿಲ್ಲ. ಬಹುಶ ಮನಮೋಹನ್ ಸಿಂಗ್ ಅವರಿಗೆ ಮಕ್ಕಳು ಎಷ್ಟು ಅನ್ನೋದು ಹೆಚ್ಚಾಗಿ ಯಾರಿಗೂ ಗೊತ್ತಿಲ್ಲ. ಮನಮೋಹನ್ ಸಿಂಗ್ ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಇದು ದಿವಂಗತ ಡಾ. ಮನಮೋಹನ್ ಸಿಂಗ್ ಅವರ ಕುಟುಂಬದ ಪರಿಚಯ. 92 ವರ್ಷಗಳ ಕಾಲ ಬದುಕಿದ್ದ ಮನಮೋಹನ್ ಸಿಂಗ್ ಅವರು ಈಗ ನಮ್ಮಲ್ಲೆಲ್ಲ ಅಗಲಿದ್ದಾರೆ.