ಊರಿಗೆ ಊರೇ ನಮ್ದು: ದೇವಸ್ಥಾನ, ಸಾರಿಗೆ ಬಸ್ ಟರ್ಮಿನಲ್ ಎಲ್ಲವೂ ವಕ್ಫ್ ಆಸ್ತಿ ಎಂದು ಘೋಷಣೆ!

Sep 23, 2024, 11:09 PM IST

ವಕ್ಫ್ ಕಾಯ್ದೆ ಜಾರಿಗೆ ಬಂದ ಬಳಿಕ ವರ್ಷದಿಂದ ವರ್ಷಕ್ಕೆ ಆಸ್ತಿ ಏರಿಕೆಯಾಗುತ್ತಲೇ ಹೋಗಿದೆ. 1,000 ವರ್ಷ 1,500 ವರ್ಷಗಳ ಹಳೇ ದೇವಸ್ಥಾನಗಳನ್ನೂ ವಕ್ಫ್ ಆಸ್ತಿ ಎಂದು ಘೋಷಿಸಿದ ಘಟನೆ ಬೆನ್ನಲ್ಲೇ ಇದೀಗ ಮತ್ತೊಂದು ಸ್ಫೋಟಕ ವರದಿಯೊಂದು ಬಹಿರಂಗವಾಗಿದೆ. ದೆಹಲಿಯ ಡಿಡಿಎ ಬಸ್ ಟರ್ಮಿನಲ್, ಬಸ್ ಕಚೇರಿ, ಸ್ಮಶಾನ ಸೇರಿದಂತೆ ಹಲವು ಪ್ರದೇಶಗಳನ್ನು ವಕ್ಪ್ ತನ್ನದೆಂದು ಘೋಷಿಸಿದೆ. ರೈಲು ಹಳಿ, ರೈಲು ಪ್ಲಾಟ್‌ಫಾರ್ಮ್ ಸೇರಿದಂತೆ ಹಲುವ ಆಸ್ತಿಗಳು ಇದೀಗ ವಕ್ಫ್ ಕೈಯಲ್ಲಿದೆ ಅನ್ನೋ ಆರೋಪ ಇದೀಗ ಜೋರಾಗುತ್ತಿದೆ.