ವಕ್ಫ್​ಗೆ ಮೋದಿ ಮಾಸ್ಟರ್​ ಸ್ಟ್ರೋಕ್, ಕಾಂಗ್ರೆಸ್‌ ಸೇರಿದಂತೆ ಇಂಡಿಯಾ ಮೈತ್ರಿಯ ವಿರೋಧ!

Aug 8, 2024, 11:22 PM IST

ನವದೆಹಲಿ (ಆ.8): ವಕ್ಫ್​ ಮಂಡಳಿ ಸರ್ವಾಧಿಕಾರಕ್ಕೆ ಮೋದಿ ಸರ್ಕಾರದ ಅಂಕುಶ ಹಾಕಿದೆ. ಗುರುವಾರ  ಲೋಕಸಭೆಯಲ್ಲಿ ವಕ್ಫ್​ ತಿದ್ದುಪಡಿ ಮಸೂದೆ ಮಂಡನೆಯಾಗಿದೆ. ಸಂಸದೀಯ ವ್ಯವಹಾರಗಳ ಸಚಿವ ಕಿರಿಣ್​ ರಿಜಿಜು ತಿದ್ದುಪಡಿ ಮಸೂದೆಯನ್ನು ಮಂಡನೆ ಮಾಡಿದೆ.

ತಿದ್ದುಪಡಿ ಮಸೂದೆ ಮೇಲೆ ಚರ್ಚೆಗೆ ಅವಕಾಶ ಎದುರಾದಾಗ ಕೋಲಾಹಲವಾಗಿದೆ. ಮುಸ್ಲಿಮರೇ ಟಾರ್ಗೆಟ್​ ಎಂದು ಕಾಂಗ್ರೆಸ್​ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರೆ,  44 ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರ ಸಮರ್ಥನೆ ಮಾಡಿಕೊಂಡಿದೆ.

ಎನ್‌ಡಿಎ ಸರ್ಕಾರಕ್ಕೆ ಅಲ್ಪಸಂಖ್ಯಾತರ ಮೇಲೆ ಕೋಪ ಇದೆ: ವಕ್ಫ್ ಕಾಯ್ದೆ ತಿದ್ದುಪಡಿ ವಿಚಾರಕ್ಕೆ ಸಿಎಂ ಕಿಡಿ

ಹೊಸ ತಿದ್ದುಪಡಿಯಲ್ಲಿ, ಇಸ್ಲಾಂ ಅನುಸರಿಸುವ ವ್ಯಕ್ತಿ ಎಂದು ಪರಿಗಣನೆ. ಮಹಿಳೆಯರಿಗೂ ಆದ್ಯತೆ ನೀಡಲಾಗುತ್ತದೆ. ಸರ್ವೆ ಕಮಿಷನರ್ ಪಾತ್ರ ಇನ್ಮುಂದೆ ಜಿಲ್ಲಾಧಿಕಾರಿಗಳು ನಿರ್ವಹಿಸುತ್ತಾರೆ. ವಕ್ಫ್​ ಆಸ್ತಿ ಪಾರದರ್ಶಕತೆಗಾಗಿ ಕೇಂದ್ರದ ಪೋರ್ಟಲ್​ನಲ್ಲಿ ನೋಂದಣಿ. ವಕ್ಫ್​ ಕಮಿಟಿಯಲ್ಲಿ ಮಹಿಳಾ ಸದಸ್ಯರ ಪ್ರಾತಿನಿಧ್ಯ ಕಡ್ಡಾಯವಾಗಿರಲಿದೆ.