Viral News: ಮೈಕೊರೆಯುವ ಚಳಿ, ಬಿಸಿನೀರು ಸ್ನಾನಕ್ಕೆ ಪೋರನ ಖಿಲಾಡಿ ಐಡ್ಯಾ..!

Dec 26, 2021, 1:25 PM IST

ಈಗಾಗಲೇ ಮೈ ಕೊರೆಯುವ ಚಳಿ (Winter) ಶುರುವಾಗಿದೆ. ಸ್ವೆಟರ್ (Sweeter) ಮಫ್ಲರ್ ಹಾಕಿಕೊಂಡು ಎಷ್ಟು ಬೆಚ್ಚಗೆ ಮಾಡಿಕೊಂಡರೂ ಚಳಿಯಿಂದ ನಡುಗುತ್ತಿದ್ದೇವೆ. ಇಲ್ಲೊಬ್ಬ ಹುಡುಗ ಬಿಸಿ ನೀರು ಸ್ನಾನ ಮಾಡಲು ಖಿಲಾಡಿ ಐಡ್ಯಾ ಮಾಡಿದ್ದಾನೆ.   ಒಲೆಗೆ (Fire) ಬೆಂಕಿ ಹಾಕಿ, ಕಡಾಯಿ ಪಾತ್ರೆ ಇಡುತ್ತಾನೆ. ಅದಕ್ಕೆ ನೀರು ಹಾಕಿಕೊಂಡು, ಅದರೊಳಗೆ ತಾನೂ ಕುಳಿತು, ಬಿಸಿ ನೀರು ಹೊಯ್ದುಕೊಳ್ಳುತ್ತಾನೆ.  ಇದನ್ನು ನೋಡಿದ ಕೆಲವರು ಬಾಲಕನ ಐಡಿಯಾಗೆ ಗುಡ್ ಎಂದರೆ, ಇನ್ನು ಕೆಲವರು ಇವೆಲ್ಲಾ ಅಪಾಯ, ಯಾರೂ ಹೀಗೆಲ್ಲಾ ಮಾಡಬೇಡಿ ಎಂದು ಎಚ್ಚರಿಸಿದ್ದಾರೆ.