ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪರಶುರಾಮನ ಹಾರಾಟ!

ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪರಶುರಾಮನ ಹಾರಾಟ!

Published : Jan 24, 2021, 09:43 PM ISTUpdated : Jan 25, 2021, 09:00 AM IST

ಈ ಬಾರಿಯ ಗಣ ರಾಜ್ಯೋತ್ಸವದಲ್ಲಿ ಹಲವು ವಿಶೇಷತೆಗಳಿವೆ. 1947-48ರಲ್ಲಿ ನಡೆದ ಪಾಕಿಸ್ತಾನ ನಡುವಿನ ಘರ್ಷಣೆ ವೇಳೆ ಭಾರತದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ವಿಂಟೇಜ್ ಡಕೋಟಾ ಏರ್‌ಕ್ರಾಫ್ಟ್ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುತ್ತಿದೆ. ಡಕೋಟಾ ಏರ್‌ಕ್ರಾಫ್ಟ್ ಇದೀಗ ಪರಶುರಾಮ ಎಂಬ  ಹೆಸರಿನೊಂದಿಗೆ  ರಾಜಪಥದಲ್ಲಿ ಹಾರಾಟ ನಡೆಸಲಿದೆ
 

ಈ ಬಾರಿಯ ಗಣ ರಾಜ್ಯೋತ್ಸವದಲ್ಲಿ ಹಲವು ವಿಶೇಷತೆಗಳಿವೆ. 1947-48ರಲ್ಲಿ ನಡೆದ ಪಾಕಿಸ್ತಾನ ನಡುವಿನ ಘರ್ಷಣೆ ವೇಳೆ ಭಾರತದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ವಿಂಟೇಜ್ ಡಕೋಟಾ ಏರ್‌ಕ್ರಾಫ್ಟ್ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುತ್ತಿದೆ. ಡಕೋಟಾ ಏರ್‌ಕ್ರಾಫ್ಟ್ ಇದೀಗ ಪರಶುರಾಮ ಎಂಬ  ಹೆಸರಿನೊಂದಿಗೆ  ರಾಜಪಥದಲ್ಲಿ ಹಾರಾಟ ನಡೆಸಲಿದೆ.

ಹಿಂದೂ ಪುರಾಣದಲ್ಲಿನ ವಿಷ್ಣುವಿನ ಆರನೇ ಆವತಾರವಾಗಿರುವ ಪರಶುರಾಮನ ಹೆಸರನ್ನು ಈ ಡಕೋಟಾ ಏರ್‌ಕ್ರಾಫ್ಟ್‌ಗೆ ಇಡಲಾಗಿದೆ. 2018ರಲ್ಲಿ ಪರಶುರಾಮ ಏರ್‌ಕ್ರಾಪಫ್ಟ್ ಭಾರತೀಯ ವಾಯುಸೇನೆಯ 86ನೇ ವರ್ಷಾಚರಣೆಯಲ್ಲಿ ಮೊದಲ ಬಾರಿಗೆ ಪಾಲ್ಗೊಂಡಿತ್ತು.

ವಿಂಟೇಜ್ ಡಕೋಟಾ ಏರ್‌ಕ್ರಾಫ್ಟ್‌ನ್ನು ರಾಜ್ಯಸಭಾ ಸದಸ್ಯ, ಬಿಜೆಪಿ ವಕ್ತಾರ ರಾಜೀವ್ ಚಂದ್ರಶೇಖರ್ ಖರೀದಿಸಿ ವಾಯುಸೇನೆಗೆ ಉಡುಗೊರೆಯಾಗಿ ನೀಡಿದ್ದಾರೆ. ಚಂದ್ರಶೇಖರ್ ತಂದೆ MK ಚಂದ್ರಶೇಕರ್ ಇದೇ ಡಕೋಟಾ ಏರ್‌ಕ್ರಾಫ್ಟ್ ಪೈಲೆಟ್ ಆಗಿ ಸೇವೆ ಸಲ್ಲಿಸಿದ್ದರು.

ಅಕ್ಟೋಬರ್ 26, 1947ರಲ್ಲಿ ಬುಡಕಟ್ಟು ಉಗ್ರರಿಂದ ಶ್ರೀನಗರ ರಕ್ಷಿಸಿದ ಹೆಗ್ಗಳಿಕೆ ಇದೇ ಡಕೋಟ ಏರ್‌ಕ್ರಾಫ್ಟ್‌ಗಿದೆ. ಡಕೋಟಾ ಏರ್‌ಕ್ರಾಫ್ಟ್ ಮೂಲಕ ಸೈನಿಕರನ್ನು ಏರ್‌ಲಿಫ್ಟ್ ಮಾಡಿ, ಶ್ರೀನಗರ ಉಳಿಸುವಲ್ಲಿ ಯಶಸ್ವಿಯಾಗಿತ್ತು. ಇನ್ನು ಬಾಂಗ್ಲಾಗೆ ಸ್ವಾತಂತ್ರ್ಯ ಕೊಡುವಲ್ಲಿ ಇದೇ ಡಕೋಟಾ ಏರ್‌ಕ್ರಾಫ್ಟ್ ಪ್ರಮುಖ ಪಾತ್ರ ನಿರ್ವಹಿಸಿತ್ತು.
 

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!