ಡಿಸೆಂಬರ್ 16, 1971ರಲ್ಲಿ ಭಾರತೀಯ ಸೇನಾ ಪರಾಕ್ರಮಕ್ಕೆ ಪಾಕಿಸ್ತಾನ ಮಂಡಿಯೂರಿತ್ತು. ಇಷ್ಟೇ ಅಲ್ಲ ಭಾರತದ ಶೌರ್ಯಕ್ಕೆ ಬಾಂಗ್ಲಾದೇಶ ಪಾಕ್ ಕೈಯಿಂದ ವಿಮುಕ್ತಿಗೊಂಡಿತ್ತು. ಈ ದಿನವನ್ನು ಭಾರತ ವಿಜಯ್ ದಿವಸ್ ಆಚರಣೆ ಮಾಡುತ್ತಿದೆ. ಇಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದ್ದಾರೆ.