ನೋಡ ನೋಡುತ್ತಿದ್ದಂತೆ ಕೆರೆಗೆ ಬಿದ್ದ ಬಾಲಕ... ನೋಡಿ ಈ ವಾರ ವೈರಲ್‌ ಆದ ವಿಡಿಯೋಗಳು

ನೋಡ ನೋಡುತ್ತಿದ್ದಂತೆ ಕೆರೆಗೆ ಬಿದ್ದ ಬಾಲಕ... ನೋಡಿ ಈ ವಾರ ವೈರಲ್‌ ಆದ ವಿಡಿಯೋಗಳು

Published : Jan 10, 2022, 03:55 PM IST

ನವದೆಹಲಿ(ಜ.10): ಈ ವಾರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡಿದ ವೈರಲ್‌ ವಿಡಿಯೋಗಳ ಬಗ್ಗೆ ಇಲ್ಲಿದೆ ಡಿಟೇಲ್ಸ್‌

ಹಿಮ ಬಿರುಗಾಳಿಗೆ ಸವಾಲೊಡ್ಡಿ ನಿಂತು ಕರ್ತವ್ಯ ನಿರ್ವಹಿಸುತ್ತಿರುವ ಯೋಧನ ವಿಡಿಯೋವೊಂದು ವೈರಲ್‌ ಆಗಿದ್ದು ಎಲ್ಲರ ಗಮನ ಸೆಳೆಯುತ್ತಿದೆ. ಕೊರೆಯುವ ಚಳಿ, ಮಳೆ ಯಾವುದಕ್ಕೂ ತಲೆಕೆಡಿಸಿಕೊಳ್ಳದ ಯೋಧರು ಸದಾ ಕಾಲ ಸೇವೆಗೆ ಸಿದ್ಧ ಎಂಬುದನ್ನು ಈ ವಿಡಿಯೋ ತೋರಿಸುತ್ತಿದೆ. ಆಟವಾಡುತ್ತಿರುವಾಗಲೇ ನೋಡ ನೋಡುತ್ತಿದ್ದಂತೆ ಬಾಲಕನೋರ್ವ ಕೆಳಗೆ ಬಿದ್ದ ಘಟನೆ ನಡೆದಿದೆ. ಕೂಡಲೇ ಅಲ್ಲೇ ಇದ್ದ ಯುವಕನೋರ್ವ ಕೆರೆಗೆ ಹಾರಿ ಈ ಪುಟ್ಟ ಬಾಲಕನ ರಕ್ಷಣೆ ಮಾಡಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

ರಸ್ತೆ ಅಪಘಾತವಾಗಿ ನಡುರಸ್ತೆಯಲ್ಲೇ ಕಾರಿಗೆ ಬೆಂಕಿ ಹತ್ತಿಕೊಂಡ ಘಟನೆಯೊಂದು ನಡೆದಿದ್ದು, ಕಾರಿನಲ್ಲಿದ್ದವರು ರೋಚಕವಾಗಿ ಪಾರಾಗಿದ್ದಾರೆ. ಅಪಘಾತವಾದ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬ ಕಾರಿನ ಮುಂಬದಿಯ ಗಾಜು ಒಡೆದು ಕಾರಿನೊಳಗಿರುವರನ್ನು ರಕ್ಷಿಸಿದ್ದಾನೆ. ಈ ವಿಡಿಯೋ ಕೂಡ ಈ ವಾರ ವೈರಲ್ ಆಗಿದೆ. ಹಾವು ಮರಿ ಹಾಕಿದ್ದನ್ನು ನೀವು ಎಂದಾದರೂ ನೋಡಿದ್ದೀರಾ. ಹಾಗಿದ್ದರೆ ಈ ವಿಡಿಯೋ ನೀವು ನೋಡಲೇಬೇಕು. ಇದುವರೆಗೆ ಹಾವು ಮೊಟ್ಟೆ ಇಟ್ಟಿದ್ದನ್ನು ಮಾತ್ರ ನಾವು ಕೇಳಿದ್ದೆವು. ಆದರೆ ಇಲ್ಲೊಂದು ಹಾವು ಮರಿ ಹಾಕಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ವಿಮಾನದಲ್ಲಿ ಮಾಸ್ಕ್‌ ತೆಗೆದು ಊಟ ಮಾಡಿದ್ದಕ್ಕೆ ವೃದ್ಧನೋರ್ವನ ಮೇಲೆ ಮಹಿಳೆ ಹಲ್ಲೆ ಮಾಡಿದ ಘಟನೆ ನಡೆದಿದೆ. ಆದರೆ ಹೊಡೆದಾಕೆಯೂ ಮಾಸ್ಕ್‌ ಧರಿಸದೇ ಇರುವುದು ನೋಡಿ ಜನ ಆಕ್ರೋಶಗೊಂಡಿದ್ದಾರೆ. ನಂತರ ಅಟ್ಲಾಂಟದಲ್ಲಿ ವಿಮಾನ ಲ್ಯಾಂಡ್‌ ಆಗುತ್ತಿದ್ದಂತೆ ಹಲ್ಲೆ ಮಾಡಿದ ಮಹಿಳೆಯನ್ನು ಬಂಧಿಸಲಾಗಿದೆ.  ಎರಡು ದೊಡ್ಡ ಗೂಡ್ಸ್‌ ಲಾರಿಗಳ ಮಧ್ಯೆ ಸಣ್ಣ ಕಾರೊಂದು ಸಿಲುಕಿ ಅಪ್ಪಚ್ಚಿಯಾದ ವಿಡಿಯೋವೊಂದು ವೈರಲ್‌ ಆಗಿದ್ದು, ಅಪಘಾತದ ಭೀಕರ ದೃಶ್ಯವನ್ನು ಇದು ಕಣ್ಣಿಗೆ ಕಟ್ಟುವಂತಿದೆ. 

24:25ಭಾರತದ ಬಳಿಯೂ ಇದೆ ಮಲಕ್ಕಾ ಜಲಸಂಧಿ ಮುಚ್ಚಿದ್ರೆ ಕೆಲ ದೇಶದ ಕತೆ ಗೋವಿಂದ
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
20:04Suvarna Focus: ಕೆಂಪು ರಕ್ಕಸ ಕೋಟೆ ಧೂಳಿಪಟ, ಭಾರತ ಈಗ ನಕ್ಸಲ್ ಮುಕ್ತ! 59 ವರ್ಷಗಳ ರಕ್ಕಸನಿಗೆ ಶಾಶ್ವತ ಅಂತ್ಯಕ್ರಿಯೆ
53:2759 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ!
16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
Read more