EXCLUSIVE! ಏಕರೂಪ ನಾಗರೀಕ ಸಂಹಿತೆ ಈ ಸಮಯದ ಅಗತ್ಯ: ಉತ್ತರಾಖಂಡ ಸ್ಪೀಕರ್‌ ರಿತು ಖಂಡೂರಿ ಭೂಷಣ್‌!

EXCLUSIVE! ಏಕರೂಪ ನಾಗರೀಕ ಸಂಹಿತೆ ಈ ಸಮಯದ ಅಗತ್ಯ: ಉತ್ತರಾಖಂಡ ಸ್ಪೀಕರ್‌ ರಿತು ಖಂಡೂರಿ ಭೂಷಣ್‌!

Published : Apr 06, 2024, 07:39 PM IST

ಏಕರೂಪ ನಾಗರೀಕ ಸಂಹಿತೆ ಪರವಾಗಿ ಮಾತನಾಡಿರುವ ಉತ್ತರಾಖಂಡದ ಸ್ಪೀಕರ್‌ ರಿತು ಖಂಡೂರಿ ಭೂಷಣ್‌, ಕಾಯ್ದೆ ಈ ಸಮಯದ ಅಗತ್ಯ ಎಂದು ಹೇಳಿದ್ದಾರೆ.

ನವದೆಹಲಿ (ಏ.6): ಉತ್ತರಾಖಂಡ ಸ್ಪೀಕರ್ ರಿತು ಖಂಡೂರಿ ಭೂಷಣ್ ಅವರು ಏಷ್ಯಾನೆಟ್ ನ್ಯೂಸ್‌ಬಲ್‌ನ ಅನೀಶ್ ಕುಮಾರ್ ಜೊತೆಗಿನ ಎಕ್ಸ್‌ಕ್ಲೂಸಿವ್‌ ಸಂದರ್ಶನದಲ್ಲಿ ಮಾತನಾಡಿದ್ದು, ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅನುಷ್ಠಾನವು ಇಂದಿನ ಅಗತ್ಯವಾಗಿದೆ ಮತ್ತು ಮಹಿಳೆಯರು ಮತ್ತು ಸಮಾಜವನ್ನು ಇದು  ಸಶಕ್ತಗೊಳಿಸುತ್ತದೆ ಎಂದಿದ್ದಾರೆ.

ಉತ್ತರಾಖಂಡ ಇತ್ತೀಚೆಗೆ ಸ್ವಾತಂತ್ರ್ಯದ ನಂತರ ಏಕರೂಪ ನಾಗರಿಕ ಸಂಹಿತೆ ಕಾನೂನನ್ನು ಜಾರಿಗೊಳಿಸಿದ ಭಾರತದ ಮೊದಲ ರಾಜ್ಯ ಎನಿಸಿಕೊಂಡಿದೆ. ಏಕರೂಪ ನಾಗರಿಕ ಸಂಹಿತೆ ಮಸೂದೆ 2024 ರ ಅಂಗೀಕಾರ -- ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಉತ್ತರಾಖಂಡದ ಅದರ ಸರ್ಕಾರದ ದೀರ್ಘಕಾಲದ ಬದ್ಧತೆಯನ್ನು ಪೂರೈಸುವುದಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅನುಮೋದನೆಯೂ ಇದಕ್ಕೆ ಸಿಕ್ಕಿದೆ.

ಲೋಕಸಭೆ ಚುನಾವಣೆ ಪ್ರಕ್ರಿಯೆ ಆರಂಭವಾಗಿದ್ದು, ಏಕರೂಪ ನಾಗರಿಕ ಸಂಹಿತೆ ಇಂದು ದೇಶದ ರಾಜಕೀಯ ಚರ್ಚೆಯ ಕೇಂದ್ರಬಿಂದುವಾಗಿದೆ. ಯುಸಿಸಿ ಹಿಂದೂ ಕೇಂದ್ರಿತ ಹೇರಿಕೆ ಎಂಬ ಟೀಕೆಗಳನ್ನು ತಳ್ಳಿಹಾಕಿದ ಉತ್ತರಾಖಂಡ ವಿಧಾನಸಭೆ ಸ್ಪೀಕರ್ ರಿತು ಖಂಡೂರಿ ಭೂಷಣ್, ಈ ಕಾಯ್ದೆ ಇಂದಿನ ಅಗತ್ಯ ಎಂದು ಹೇಳಿದ್ದಾರೆ.
 

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
Read more