Mar 6, 2022, 6:49 PM IST
ಲಕ್ನೋ(ಮಾ.06): ಈ ಬಾರಿಯ ಉತ್ತರ ಪ್ರದೇಶ ಚುನಾವಣೆಯಲ್ಲಿ ಯಾವುದೇ ಪ್ರಮುಖ ರಾಜಕೀಯ ಪಕ್ಷಗಳ ಚಿಹ್ನೆಯಲ್ಲದಿದ್ದರೂ ಬುಲ್ಡೋಜರ್‌ಗಳು ಮಾತ್ರ ತುಂಬಾ ಸದ್ದು ಮಾಡಿವೆ. ವಿಪಕ್ಷಗಳು ಸಿಎಂ ಯೋಗಿ ಆದಿತ್ಯನಾಥರನ್ನು ಬುಲ್ಡೋಜರ್ ಬಾಬಾ ಎಂದೇ ಟೀಕಿಸಿದ್ರೆ, ಯೋಗಿ ಮಾತ್ರ ಇದನ್ನು ಪಾಸಿಟಿವ್ ಆಗಿ ಸ್ವೀಕರಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಬುಲ್ಡೋಜರ್ ಈ ಬಾರಿ ಅಭಿವೃದ್ಧಿ ಹಾಗೂ ಶೋಷಣೆಯ ರೂಪಕವಾಗಿ ಬಳಕೆಯಾಗುತ್ತಿದೆ. ಅಧಿಕಾರ ಗಿಟ್ಟಿಸಿದ ಬಇಕ ಯೋಗಿ ಆದದಿತ್ಯನಾಥ್ ಸರ್ಕಾರ ಅಕ್ರಮ ಕಟ್ಟಡಗಳೆಂದು ಹಲವು ಕಟ್ಟಡಗಳನ್ನು ನೆಲಸಮ ಮಾಡಿದೆ. ವಿಪಕ್ಷಗಳ ಪ್ರಕಾರ ಬುಲ್ಡೋಜರ್ ಎಂದದರೆ ಯೋಗಿ ಸರ್ಕಾರದ ಕೆಡಹುವ ಮತ್ತು ಧ್ವಂಸದ ಸಂಕೇತವಾಗಿದೆ.