ಉಪ್ಪನ್ನು ಸಿದ್ದಪಡಿಸಿಕೊಳ್ಳಿ, ಯೋಗಿ, ಮೋದಿಯನ್ನು ಸಮಾಧಿ ಮಾಡ್ತೀವಿ ಎಂದ ಅಜಯ್‌ ರೈಗೆ ಶಾಕ್!

Feb 28, 2022, 5:39 PM IST

ಲಕ್ನೋ (ಫೆ. 28): 2022 ರ ವಿಧಾನಸಭಾ ಚುನಾವಣೆಗೂ ಮುನ್ನ, ಪಡಿತರ ಹಂಚಿಕೆ ಯೋಜನೆ ಅಡಿಯಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ವಾರಣಾಸಿ ಭಾಗದಲ್ಲಿ ಅತೀ ಹೆಚ್ಚು ಉಪ್ಪನ್ನು ನೀಡಿದ್ದವು. ಆ ಯೋಜನೆಯನ್ನು ಕಾಂಗ್ರೆಸ್ ಅಭ್ಯರ್ಥಿ ಅಜಯ್ ರೈ ಅಸ್ತ್ರವಾಗಿ ಬಳಸಿಕೊಂಡಿದ್ದಾರೆ.

'ಆ ಉಪ್ಪನ್ನು ನೀವು ಇಟ್ಟುಕೊಳ್ಳಿ. ಮಾರ್ಚ್ 10 ರಂದು ಪ್ರಧಾನಿ ಮೋದಿ, ಸಿಎಂ ಯೋಗಿ ಸಮಾಧಿ ಮಾಡುತ್ತೇವೆ. ಅದರ ಮೇಲೆ ಚೆಲ್ಲಿ' ಎಂದು ವಿವಾದಾತ್ಮಕ ಹೇಳಿಕೆ ನೀಡಿ, ಚುನಾವಣಾ ಆಯೋಗದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅವರ ಮೇಲೆ ದೂರು ದಾಖಲಾಗಿದೆ.