UP Elections 2022: ಹಿಂದುಳಿದ ಜಾತಿಗಳು ಮತ್ತು ದಲಿತರ ಮತ ಸೆಳೆಯಲು ಪ್ರಿಯಾಂಕ ತಂತ್ರ?

UP Elections 2022: ಹಿಂದುಳಿದ ಜಾತಿಗಳು ಮತ್ತು ದಲಿತರ ಮತ ಸೆಳೆಯಲು ಪ್ರಿಯಾಂಕ ತಂತ್ರ?

Published : Mar 04, 2022, 04:16 PM IST

ಉತ್ತರ ಪ್ರದೇಶ ಚುನಾವಣೆಯ ಇನ್ನೊಂದು ಹಂತದ ಮತದಾನ ಬಾಕಿಯಿದೆ. ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಉತ್ತರ ಪ್ರದೇಶದಲ್ಲೇ ಬೀಡುಬಿಟ್ಟಿದ್ದಾರೆ. ಮತದಾರರನ್ನು ಸೆಳೆಯಲು ಕೊನೆಕ್ಷಣದ ಎಲ್ಲಾ ಕಸರತ್ತುಗಳನ್ನು ನಡೆಸುತ್ತಿದ್ದಾರೆ.
 

ಉತ್ತರ ಪ್ರದೇಶ ಚುನಾವಣೆಯ ಇನ್ನೊಂದು ಹಂತದ ಮತದಾನ ಬಾಕಿಯಿದೆ.  ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಉತ್ತರ ಪ್ರದೇಶದಲ್ಲೇ ಬೀಡುಬಿಟ್ಟಿದ್ದಾರೆ. ಮತದಾರರನ್ನು ಸೆಳೆಯಲು ಕೊನೆಕ್ಷಣದ ಎಲ್ಲಾ ಕಸರತ್ತುಗಳನ್ನು ನಡೆಸುತ್ತಿದ್ದಾರೆ.

ಉತ್ತರ ಪ್ರದೇಶದಲ್ಲಿರುವ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ, ಸಂತ ಕಬೀರದಾಸರ ಮಠಕ್ಕೆ ಭೇಟಿ ನೀಡಿದ್ದಾರೆ. ಮಹಂತ್ ವಿವೇಕದಾಸ್ ಅವರೊಂದಿಗೆ ಮಠಕ್ಕೆ ತೆರಳಿದ ಪ್ರಿಯಾಂಕಾ ಗಾಂಧಿ ಇಲ್ಲಿನ ಸಂಪೂರ್ಣ ಇತಿಹಾಸವನ್ನು ತಿಳಿದುಕೊಂಡರು. 

ಇಲ್ಲಿನ ಬಗ್ಗೆ ಪ್ರಿಯಾಕಾ ಗಾಂಧಿಗೆ ಮಾಹಿತಿ ನೀಡಿದ ಮಹಂತ್ ವಿವೇಕದಾಸ್ ಕಬೀರಪಂಥಿಗಳಿಗೆ ಮತ್ತು ದೇಶಾದ್ಯಂತ ಕಬೀರದಾಸ್‌ರನ್ನು ಮೇಲೆ ನಂಬಿಕೆ ಇರಿಸುವ ಭಕ್ತರಿಗೆ ಕಬೀರಚೌರ ಮಠವು ಒಂದು ಪವಿತ್ರ ಸ್ಥಳವಾಗಿದೆ ಎಂದಿದ್ದಾರೆ. 1934ರಲ್ಲಿ ಮಹಾತ್ಮ ಗಾಂಧಿ ಕೂಡ ಈ ಮಠಕ್ಕೆ ಭೇಟಿ ನೀಡಿದ್ದರು. ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಕೂಡ ಇಲ್ಲಿಗೆ ಹಲವು ಬಾರಿ ಬಂದಿದ್ದಾರೆ. ರಾಷ್ಟ್ರಕವಿ ರವೀಂದ್ರನಾಥ ಠಾಗೋರ್ ಕೂಡ ಇಲ್ಲಿಯೇ ಇರುತ್ತಿದ್ದರು ಎಂದು ತಿಳಿಸಿದರು.

1934ರಲ್ಲಿ ಗಾಂಧೀಜಿ ಜನರನ್ನುದ್ದೇಶಿಸಿ ಮಾತನಾಡಿದ್ದ ಸ್ಥಳದಲ್ಲಿರುವ ಮರವನ್ನೂ ಮಹಂತ್ ವಿವೇಕದಾಸ್ ಅವರು ಪ್ರಿಯಾಂಕಾ ಗಾಂಧಿಗೆ ತೋರಿಸಿದರು. ಇದಾದ ಬಳಿಕ ಪ್ರಿಯಾಂಕಾ ಮಠದಲ್ಲಿರುವ ದೇವಸ್ಥಾನಕ್ಕೆ ಭೇಟಿ ನೀಡಿ, ದರ್ಶನ ಪಡೆದರು. ಬಳಿಕದ ನಂತರ ಪ್ರಿಯಾಂಕಾ ದೇವಸ್ಥಾನದ ಪ್ರಾಂಗಣದಲ್ಲಿಯೇ ಕೆಲಕಾಲ ಕುಳಿತು ಅಲ್ಲಿದ್ದವರೊಂದಿಗೆ ಭಜನೆ ಆಲಿಸಿದರು.

ಸಂತ ಕಬೀರದಾಸರ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಸಂದೇಶದಿಂದ ಉತ್ತರ ಪ್ರದೇಶದ ದಲಿತ ಮತ್ತು ಅತ್ಯಂತ ಹಿಂದುಳಿದ ವರ್ಗಗಳು ಬಹಳಷ್ಟು ಪ್ರಭಾವಿತರಾಗಿದ್ದಾರೆ. ಸಂತ ಕಬೀರದಾಸ್‌ಗೆ ಸಾಕಷ್ಟು ಸಾಂಸ್ಕೃತಿಕ ಮಹತ್ವವಿದೆ.  ಇನ್ನು ಏಳನೇ ಹಂತದ ಚುನಾವಣೆಯಲ್ಲಿ ಹಿಂದುಳಿದ ಜಾತಿಗಳು ಮತ್ತು ದಲಿತರ ಸಂಖ್ಯೆ ಗಣನೀಯವಾಗಿದೆ. ಈ ವರ್ಗದ ಮತದಾರರನ್ನು ಪ್ರಿಯಾಂಕಾ ತನ್ನ ಕಡೆಗೆ ಆಕರ್ಷಿಸಲು ಪ್ರಯತ್ನಿಸುತ್ತಿದ್ದಾರೆ. ಕಬೀರಮಠಕ್ಕೆ ಭೇಟಿ ನೀಡುವ ಮೂಲಕ ಪ್ರಿಯಾಂಕಾ ದೊಡ್ಡ ಸಂದೇಶ ನೀಡಿದ್ದಾರೆ.

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
Read more