Feb 25, 2022, 5:06 PM IST
ಲಕ್ನೋ (ಫೆ. 25): ಯುಪಿ ವಿಧಾನಸಭಾ ಚುನಾವಣೆ ಅಖಾಡ ರಂಗೇರಿದೆ. ಈ ಸಂದರ್ಭದಲ್ಲಿ ರಾಜಕೀಯ ನಾಯಕರ ನಡೆ ಗಮನ ಸೆಳೆಯುತ್ತದೆ. ಬಿಜೆಪಿ ಸಂಸದೆ ರೀಟಾ ಬಹುಗುಣ ಜೋಶಿ ಮತ್ತು ಅವರ ಪುತ್ರ ಮಯಾಂಕ್ ಜೋಶಿ, ಅಖಿಲೇಶ್ ಯಾದವ್ ಅವರ ಭೇಟಿ ವಿಚಾರರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚರ್ಚೆಗಳು ಕೇಳಿ ಬರುತ್ತಿವೆ.
UP Elections: ಚುನಾವಣಾ ಅಖಾಡದಲ್ಲಿ ವರುಣ್ ಗಾಂಧಿ ಕಾಣಿಸುತ್ತಿಲ್ಲ ಯಾಕೆ..?
ರೀಟಾ ಬಹುಗುಣ ಜೋಶಿ ಎಸ್‌ಪಿಗೆ ಸೇರ್ಪಡೆಗೊಳ್ಳುವ ಬಗ್ಗೆ ನಾನು ಏನನ್ನೂ ಹೇಳಲಾರೆ, ಆದರೆ ಅವರ ಮಗ ನಮ್ಮನ್ನು ಭೇಟಿಯಾಗಿದ್ದಾರೆ ಎಂದು ಅವರು ಅಖಿಲೇಶ್ ಹೇಳಿದ್ದಾರೆ.
ಈ ಹಿಂದೆ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ, ಶಾಸಕಿಯಾಗಿದ್ದ ರೀಟಾ ಬಹುಗುಣ ಜೋಶಿ 2016ರಲ್ಲಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರ್ಪಡೆಯಾಗಿದ್ದರು. ಇನ್ನು ಸಮಾಜವಾದಿ ಪಕ್ಷ ಹೆಚ್ಚು ಹೆಚ್ಚು ನಾಯಕರನ್ನು ತನ್ನತ್ತ ಸೆಳೆಯುವ ಪ್ರಯತ್ನದಲ್ಲಿದೆ ಎಂದು ಕೂಡಾ ಯುಪಿ ಮಾಜಿ ಸಿಎಂ ಅಖಿಲೇಶ್ ಯಾದವ್ ಹೇಳಿದ್ದಾರೆ. ವಾಸ್ತವವಾಗಿ, ಪ್ರಯಾಗ್‌ರಾಜ್‌ನ ಬಿಜೆಪಿ ಸಂಸದೆ ರೀಟಾ ಬಹುಗುಣ ಜೋಶಿ ಅವರ ಪುತ್ರ ಮಯಾಂಕ್ ಅವರು ಮಂಗಳವಾರ ಅಖಿಲೇಶ್ ಯಾದವ್ ಅವರನ್ನು ಭೇಟಿಯಾಗಿದ್ದಾರೆ. ಅವರ ಚಿತ್ರವನ್ನು ಎಸ್ಪಿ ಮುಖ್ಯಸ್ಥರೇ ಹಂಚಿಕೊಂಡಿದ್ದಾರೆ. ಮಯಾಂಕ್ ಜೋಶಿ ಎಸ್ಪಿ ಸೇರಬಹುದು ಎಂದು ಹೇಳಲಾಗುತ್ತಿದೆ.