ಕೇಂದ್ರದ ಬಜೆಟ್ (Union budget) ವಿರುದ್ಧ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ (Mamata Banerjee) ವಾಗ್ದಾಳಿ ನಡೆಸಿದ್ದಾರೆ.
ನವದೆಹಲಿ (ಫೆ. 01): ಕೇಂದ್ರದ ಬಜೆಟ್ (Union budget) ವಿರುದ್ಧ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ (Mamata Banerjee) ವಾಗ್ದಾಳಿ ನಡೆಸಿದ್ದಾರೆ. 'ಇದು ಪೆಗಾಸಸ್ ಆಧಾರಿತ ಬಜೆಟ್. ಹಣದುಬ್ಬರದಿಂದ ತತ್ತರಿಸಿರುವ ಜನರಿಗೆ ನೀಡಿರುವುದು ಶೂನ್ಯ. ದೊಡ್ಡ ದೊಡ್ಡ ಮಾತಾಡುವ ಸರ್ಕಾರ ಏನನ್ನೂ ನೀಡದೇ ಸೋತಿದೆ. ಮಧ್ಯಮ ವರ್ಗಕ್ಕೆ ಯಾವುದೇ ತೆರಿಗೆ ವಿನಾಯಿತಿ ಇಲ್ಲ' ಎಂದು ವಾಗ್ದಾಳಿ ನಡೆಸಿದರು.