Feb 2, 2022, 3:18 PM IST
ನವದೆಹಲಿ (ಫೆ. 02): ಈ ಬಾರಿಯ ಬಜೆಟ್‌ನಲ್ಲಿ (Union Budget 2022) ಕೃಷಿ ಪ್ರದೇಶ ವಿಸ್ತರಣೆ, ನೀರಿನ ಲಭ್ಯತೆ ಹೆಚ್ಚಳ, ನೀರಿನ ಸದ್ಬಳಕೆ, ಅಂತರ್ಜಲ ಮರುಪೂರಣ ಮತ್ತು ವರ್ಷವಿಡೀ ಕುಡಿಯುವ ನೀರು ಪೂರೈಕೆಗೆ ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ. ಕಾವೇರಿ, ಕೃಷ್ಣಾ ಸೇರಿ 6 ನದಿ ಜೋಡಣೆಗೆ ಕೇಂದ್ರದ ನೆರವು ನೀಡಿದೆ.
News Hour ತೆರಿಗೆ ಯಥಾಸ್ಥಿತಿ... ಆತ್ಮ ನಿರ್ಭರ ಭಾರತದ ಸ್ತುತಿ
ದಮನ್‌ಗಂಗಾ- ಪಿಂಜಾಲ್, ಪರ್-ತಾಪಿ, ನರ್ಮದಾ, ಗೋದಾವರಿ-ಕೃಷ್ಣಾ, ಕೃಷ್ಣಾ-ಪೆನ್ನಾರ್ ಮತ್ತು ಪೆನ್ನಾರ್- ಕಾವೇರಿ ನದಿ ಜೋಡಣೆ ಯೋಜನೆಯ ವಿಸ್ತೃತ ಕರಡು ವರದಿ ಸಿದ್ದವಾಗಿದೆ. ಯೋಜನೆ ಜಾರಿ ಸಂಬಂಧ ರಾಜ್ಯಗಳ ನಡುವೆ ಸಹಮತಿ ವ್ಯಕ್ತವಾಗುತ್ತಲೇ ಕೇಂದ್ರ ತನ್ನ ಪಾಲಿನ ಎಲ್ಲಾ ನೆರವುಗಳನ್ನು ನೀಡಲಿದೆ ಎಂದು ಹೇಳಿದೆ.
ಆಂಧ್ರಪ್ರದೇಶದ ಗೋದಾವರಿ ನದಿಯ ಹೆಚ್ಚುವರಿ ನೀರನ್ನು 124 ಕಿ.ಮೀ ದೂರದಲ್ಲಿರುವ ಕೃಷ್ಣಾ ನದಿಗೆ ಕಟ್ಟಲಾಗಿರುವ ಪ್ರಕಾಶಂ ಬ್ಯಾರೇಜ್‌ಗೆ ವರ್ಗಾಯಿಸುವ ಮೂಲಕ ಹೆಚ್ಚುವರಿ ನೀರನ್ನು ಸದ್ಭಳಕೆ ಮಾಡುವ ಉದ್ದೇಶವಿದೆ. ಆಂಧ್ರಪ್ರದೇಶದ ಕೃಷ್ಣಾ ನದಿಯ ಹೆಚ್ಚುವರಿ ನೀರನ್ನು 393 ಕಿ.ಮೀ ಕಾಲುವೆ ಮೂಲಕ ಪೆನ್ನಾರ್ ನದಿಗೆ ಪೂರೈಸುವ ಉದ್ದೇಶವಿದೆ.