ಟ್ರಾಕ್ಟರ್ ಚಾಲಕನೋರ್ವ ತುಂಬಿ ಹರಿಯುತ್ತಿದ್ದ ನದಿಯನ್ನು ದಾಟುವ ಸಾಹಸ ಮಾಡಿದ್ದು ಟ್ರಾಕ್ಟರ್ ಸಮೇತ ತಾನೂ ನೀರುಪಾಲಾಗಿದ್ದಾನೆ. ಲೋಡ್ ಆಗಿದ್ದ ಟ್ರಾಕ್ಟರ್ ಪ್ರವಾಹದ ಅಬ್ಬರಕ್ಕೆ ಸಿಲುಕಿ ಕೊಚ್ಚಿ ಹೋಗಿದೆ.
ನೀರು ಪ್ರಶಾಂತವಾಗಿ ಹರಿಯುತ್ತಿದ್ದರೆ ನೋಡಲು ಚೆಂದ ಆದರೆ ರೌದ್ರರೂಪ ತಾಳಿದರೆ ಎಲ್ಲವನ್ನೂ ಕಬಳಿಸಿಕೊಂಡು ಮುಂದೆ ಸಾಗುವುದು. ಭೋರ್ಗರೆಯುವ ಪ್ರವಾಹಕ್ಕೆ ಸಿಲುಕಿ ಹಲವು ದೊಡ್ಡ ದೊಡ್ಡ ವಾಹನಗಳು ಕೊಚ್ಚಿ ಹೋಗುತ್ತಿರುವ ಭಯಾನಕ ದೃಶ್ಯವನ್ನು ನೀವು ನೋಡಿರಬಹುದು. ಅದೇ ರೀತಿ ಇಲ್ಲೊಂದು ಕಡೆ ಟ್ರಾಕ್ಟರ್ ಚಾಲಕನೋರ್ವ ತುಂಬಿ ಹರಿಯುತ್ತಿದ್ದ ನದಿಯನ್ನು ದಾಟುವ ಸಾಹಸ ಮಾಡಿದ್ದು ಟ್ರಾಕ್ಟರ್ ಸಮೇತ ತಾನೂ ನೀರುಪಾಲಾಗಿದ್ದಾನೆ. ಲೋಡ್ ಆಗಿದ್ದ ಟ್ರಾಕ್ಟರ್ ಪ್ರವಾಹದ ಅಬ್ಬರಕ್ಕೆ ಸಿಲುಕಿ ಕೊಚ್ಚಿ ಹೋಗಿದೆ. ಹಿಮಾಚಲ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.