Karnataka Rain: ಗೋಕಾಕ್ ಫಾಲ್ಸ್ ಎದುರು ಪ್ರವಾಸಿಗರ ಸೆಲ್ಪೀ ಹುಚ್ಚಾಟ

Jul 11, 2022, 11:40 AM IST

ರಾಜ್ಯದಲ್ಲಿ ಮಳೆರಾಯನ ಆರ್ಭಟ ಜೋರಾಗಿದ್ದು, ಅವಾಂತರಗಳನ್ನು ಸೃಷ್ಟಿಸಿದ್ದಾನೆ. ಒಂದು ಕಡೆ ಪ್ರವಾಹ, ನೀರಿನ ಹರಿವು ಹೆಚ್ಚಾಗಿದ್ದರೆ, ಈ ಪ್ರವಾಹದ ಜೊತೆ ಆಟವಾಡುವವರ ಸಂಖ್ಯೆಯೇನೂ ಕಡಿಮೆ ಇಲ್ಲ. ಪ್ರವಾಹದ ಎದುರು ನಿಂತು ಸೆಲ್ಫಿ ತೆಗೆದುಕೊಳ್ಳುವುದು, ಟೂ ವೀಲರ್‌ನಲ್ಲಿ ಸರ್ಕಸ್ ಮಾಡೋದು, ಈಜಾಡೋದು ಹೀಗೆ ಒಂದೊಂದು ಸಾಹಸ ಮಾಡೋಕೆ ಹೋಗಿ ಅಪಾಯಗಳನ್ನು ತಂದುಕೊಂಡಿದ್ದಾರೆ. 

ಗುಜರಾತ್‌ನ ಜುನಾಗಢ್‌ನಲ್ಲಿ ಭಾರೀ ಮಳೆಯಿಂದ ನದಿ ನೀರು ತುಂಬಿ ಹರಿಯುತ್ತಿತ್ತು. ಈ ವೇಳೆ ಯುವಕನೊಬ್ಬ ಭಂಡ ಧೈರ್ಯ ಮಾಡಿ, ನೀರಿಗೆ ಟ್ರಾಕ್ಟರ್ ನುಗ್ಗಿಸಿದ್ದ. ನೀರಿನ ರಭಸಕ್ಕೆ ಟ್ರಾಕ್ಟರ್ ಪಲ್ಟಿಯಾಗಿತ್ತು. 

ಗೋಕಾಕ್ ಫಾಲ್ಸ್‌ನಲ್ಲಿ ಪ್ರವಾಸಿಗರು ಸೆಲ್ಫಿ ಹುಚ್ಚಾಟ ಪ್ರದರ್ಶಿಸುತ್ತಿದ್ದಾರೆ. ಅಪಾಯವನ್ನು ಲೆಕ್ಕಿಸದೇ, ಜಲಪಾತದ ತುದಿಗೆ ಹೋಗಿ ಸೆಲ್ಫಿ, ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಕಳೆದ ಒಂದು ವಾರದಿಂದ ಮಹಾರಾಷ್ಟ್ರ, ಬೆಳಗಾವಿಯನ್ನು ಸತತ ಮಳೆಯಾಗುತ್ತಿದ್ದು ಗೋಕಾಕ್ ಫಾಲ್ಸ್ ಹಾಲ್ನೊರೆಯಾಗಿ ಧುಮ್ಮಿಕ್ಕುತ್ತಿದೆ. ಏನಾದರೂ ಅನಾಹುತ ಸಂಭವಿಸುವ ಮೊದಲು ಗೋಕಾಕ್ ತಾಲ್ಲೂಕು ಆಡಳಿತ ಎಚ್ಚೆತ್ತುಕೊಳ್ಳಬೇಕಿದೆ.