Jan 9, 2025, 1:26 PM IST
ತಿರುಪತಿ(ಜ.09) ವೈಕುಂಟ ದ್ವಾರ ದರ್ಶನದ ಟಿಕೆಟ್ ಪಡೆಯುವ ವೇಳೆ ತಿರುಪತಿಯಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ 5 ಮಂದಿ ಮೃತಪಟ್ಟಿದ್ದಾರೆ. 25ಕ್ಕೂ ಹೆಚ್ತು ಭಕ್ತರು ತ್ರೀವ್ರವಾಗಿ ಅಸ್ವಸ್ಥರಾಗಿದ್ದಾರೆ. ಸುಮಾರು 4000ಕ್ಕೂ ಹೆಚ್ಚು ಭಕ್ತರು ಒಂದೇ ಬಾರಿ ಟಿಕೆಟ್ ಪಡೆಯಲು ಧಾವಿಸಿದ್ದಾರೆ. ಈ ವೇಳೆ ಕಾಲ್ತುಳಿತ ಸಂಭವಿಸಿದೆ. ಮುಂಜಾಗ್ರತಾ ಕ್ರಮ ಇಲ್ಲದೆ ಟಿಕೆಟ್ ವಿತರಣೆ ಮಾಡಿದ್ದೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಅಂತಿಮ ಕ್ಷಣದಲ್ಲಿ ಭಕ್ತರ ನಿಯಂತ್ರಿಸಲು ಪೊಲೀಸರಿಗೂ ಸಾಧ್ಯವಾಗಿಲ್ಲ.