The Kashmir Files: 4 ಲಕ್ಷ ಕುಟುಂಬಗಳ ನೋವಿನ ಕಥೆ, ತೆರೆ ಮೇಲೆ ಬಂತು ಕರಾಳ ಇತಿಹಾಸ

Mar 14, 2022, 5:25 PM IST

ವಿವೇಕ್ ರಂಜನ್ ಅಗ್ನಿಹೋತ್ರಿ (Vivek Ranjan Agnihotri) ನಿರ್ದೇಶನದ, ಅನುಪಮ್ ಖೇರ್ (Anupam Kher), ಮಿಥುನ್ ಚಕ್ರವರ್ತಿ (Mithun Chakraborty) ಪ್ರಧಾನ ಪಾತ್ರಗಳಲ್ಲಿ ನಟಿಸಿರುವ ಬಾಲಿವುಡ್ (Bollywood) ಸಿನಿಮಾ ದಿ ಕಾಶ್ಮೀರ್ ಫೈಲ್ಸ್ (The Kashmir Files) ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ಕಾಶ್ಮೀರ ಹಿಂದುಗಳ ಹತ್ಯಾಕಾಂಡದ ಕತೆ ಹೊಂದಿರುವ ಈ ಸಿನಿಮಾ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ. 

The Kashmir Files: ಕಾಶ್ಮೀರ ಫೈಲ್ಸ್ ಸಿನಿಮಾ ಬಗ್ಗೆ ಬುದ್ದಿಜೀವಿಗಳಿಗಳೇಕೆ ಉರಿದುಕೊಳ್ತಿದ್ದಾರೆ?

ಕಾಶ್ಮೀರಿ ಪಂಡಿತರ ನೋವು, ಉಗ್ರರ ಕೃತ್ಯಗಳಿಂದ ತೊಂದರೆಗೆ ಒಳಗಾದ ಜನರ ಕುರಿತು ದಿ ಕಾಶ್ಮೀರ್ ಫೈಲ್ಸ್ (The Kashmir Files) ಫಿಲಂನಲ್ಲಿ ತೋರಿಸಲಾಗಿದೆ. ಈ ಕತೆ ಕಾಲ್ಪನಿಕವಲ್ಲ; ಅದರಲ್ಲಿರುವ ಒಂದೊಂದು ದೃಶ್ಯವೂ ಅಕ್ಷರಶಃ ಸತ್ಯ.  ಸ್ವತಃ ಕಾಶ್ಮೀರಿ ಪಂಡಿತರಾದ ಅನುಪಮ್ ಖೆರ್ (Anupam Kher) ಅವರ ಅಭಿನಯ ಕಣ್ಣೀರು ತರಿಸುವಂತಿದೆ. ಈ ಚಿತ್ರದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ ಹಾಗೂ ಕಾಶ್ಮೀರಿ ಪಂಡಿತರ ಕಷ್ಟಗಳ ಬಗ್ಗೆ ತಿಳಿಸಿಕೊಡುವ ಒಳ್ಳೆಯ ಪ್ರಯತ್ನವಾಗಿದೆ.