ಕಾರ್ಮಿಕರ, ನಿರುದ್ಯೋಗಿಗಳ, ಅನಾಥರ ಬಂಧುವಾದ ಸೋನು ಸೂದ್​​ಗಾಗಿ ದೇವಾಲಯ!

Dec 21, 2020, 3:47 PM IST

ಹೈದರಾಬಾದ್(ಡಿ.21): ಸಂಕಷ್ಟದಲ್ಲಿ ಸಹಾಯ ಮಾಡೋರನ್ನ ಜನರು ದೇವರ ಪ್ರತಿರೂಪವಾಗಿ ಕಾಣ್ತಾರೆ. ಕೆಲ ಸಿನಿಪ್ರಿಯರು ತಾವು ಆರಾಧಿಸುವ ತಮ್ಮ ನೆಚ್ಚಿನ ನಟ ನಟಿಯರಿಗಾಗಿ ದೇವಾಲಯ ನಿರ್ಮಿಸಿರೋದಿದೆ. ಈಗ ತೆಲಂಗಾಣದ ಜನತೆ ಬಾಲಿವುಡ್​ ನಟ ಸೋನು ಸೂದ್​ ಅವರ ಮಾನವೀಯ ಕಾರ್ಯಗಳನ್ನ ಮೆಚ್ಚಿ ಅವರಿಗಾಗಿ ಗುಡಿ ಕಟ್ಟಿಸಿದ್ದಾರೆ.

ಕೊರೊನಾ ಸಂಕಷ್ಟದ ಸಮಯದಲ್ಲಿ ಕಾರ್ಮಿಕರು ಹಾಗೂ ವಿದ್ಯಾರ್ಥಿಗಳು ತಮ್ಮ ಊರುಗಳಿಗೆ ತೆರಳಲು ಬಸ್​ ಹಾಗೂ ವಿಮಾನದ ವ್ಯವಸ್ಥೆ ಮಾಡುವ ಮೂಲಕ ಸೋನು ಸೂದ್​ ಭಾರೀ ಪ್ರಶಂಸೆ ಗಿಟ್ಟಿಸಿದ್ದರು. ಅವರ ಮಾನವೀಯ ಕಾರ್ಯ ಅಷ್ಟಕ್ಕೇ ನಿಲ್ಲಲಿಲ್ಲ. ವಿದ್ಯಾರ್ಥಿಗಳ ಶಿಕ್ಷಣಕ್ಕೆ, ಅನೇಕ ಬಡವರಿಗೆ, ಲಾಕ್​ಡೌನ್​ ಸಂದರ್ಭದಲ್ಲಿ ಕೆಲಸ ಕಳೆದುಕೊಂಡವರಿಗೆ ಉದ್ಯೋಗ ಕೊಡಿಸುವಲ್ಲಿ ಅನೇಕ ಜನರಿಗೆ ಸೂದ್ ನೆರವಾಗಿದ್ದಾರೆ.

ಹೀಗಾಗಿ ದೇಶದ ಜನರು ಸೋನು ಸೂದ್​​ ಬಗ್ಗೆ ಭಾರೀ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ತೆಲಂಗಾಣದ ಜನತೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸೋನು ಸೂದ್​ಗಾಗಿ ದೇಗುಲವನ್ನೇ ಕಟ್ಟಿಸಿದ್ದಾರೆ.