
ರಂಜಾನ್ ಪ್ರಯುಕ್ತ ಮುಸ್ಲಿಮ್ ಸರ್ಕಾರಿ ನೌಕರರಿಗೆ ತೆಲಂಗಾಣ ಸರ್ಕಾರ ವಿಶೇಷ ವಿನಾಯಿತಿ ನೀಡಿದೆ. ಇದು ಹಿಂದೂ ನಾಯಕರ ಕೆರಳಿಸಿದೆ. ನವರಾತ್ರಿ ಸಮಯದಲ್ಲಿ ಹಿಂದೂಗಳಿಗೆ ನೀಡದ ವಿನಾಯಿತಿ ಈಗ ಯಾಕೆ ಎಂದು ಪ್ರಶ್ನಿಸಿದ್ದಾರೆ.
ರಂಜಾನ್ ಹಬ್ಬದ ಸಮಯದಲ್ಲಿ ಸರ್ಕಾರಿ ಮುಸ್ಲಿಮ್ ನೌಕರರಿಗೆ ಕೆಲಸದ ಅವಧಿಯಲ್ಲಿ ವಿನಾಯಿತಿ ನೀಡಲಾಗಿದೆ. ಒಂದು ಗಂಟೆಗಳ ಕಾಲ ಮುಸ್ಲಿಮರಿಗೆ ವಿನಾಯಿತಿ ನೀಡಿ ತೆಲಂಗಾಣ ಸರ್ಕಾರ ಆದೇಶ ಹೊರಡಿಸಿದೆ. ಇದು ವಿವಾದ ವಾಗುತ್ತಿದ್ದಂತೆ ಇತ್ತ ಆಂಧ್ರ ಪ್ರದೇಶ ಸರ್ಕಾರ ಇದೇ ರೀತಿಯ ಆದೇಶ ಹೊರಡಿಸಿದೆ. ನವರಾತ್ರಿ ಸಮಯದಲ್ಲಿ ಹಿಂದೂಗಳಿಗೆ ನೀಡದ ವಿನಾಯಿತಿ, ಇದೀಗ ಮುಸ್ಲಿಮರಿಗೆ ಯಾಕೆ? ಒಲೈಕೆ ರಾಜಕಾರಣ ಈ ಮಟ್ಟಿಗೆ ಇಳಿಯಬಾರದು ಎಂದು ಹಿಂದೂ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.