Mar 21, 2022, 5:29 PM IST
ಚೆನ್ನೈ(ಮಾ. 21) ಮೇಕೆದಾಟು (Mekedatu) ಯೋಜನೆ ವಿರುದ್ಧ ತಮಿಳುನಾಡು (Tamilnadu) ವಿಧಾನಸಭೆ ನಿರ್ಧಾರ ತೆಗೆದುಕೊಂಡಿದೆ. ತಮಿಳುನಾಡಿನ ನಿರ್ಧಾರವನ್ನು ಅಲ್ಲಿನ ಪಕ್ಷಗಳು ಸಮರ್ಥಿಸಿಕೊಂಡಿದ್ದು ಬಿಜೆಪಿ (BJP) ಸಹ ಬೆಂಬಲ ನೀಡಿದೆ.
ಪ್ರಧಾನಿ ಬಳಿ ನಿಯೋಗ ಕೊಂಡೊಯ್ಯಲು ಕರ್ನಾಟಕ ತಿರ್ಮಾನ
ತಮಿಳುನಾಡು ಬಿಜೆಪಿ ನಾಯಕ, ಐಪಿಎಸ್ ಅಧಿಕಾರಿಯಾಗಿ ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ್ದ ಅಣ್ಣಾ ಮಲೈ ಸಹ ಈ ಹಿಂದೆ ಮೇಕೆದಾಟು ಯೋಜನೆಗೆ ನಮ್ಮ ವಿರೋಧ ಎಂದಿದ್ದರು. ಇನ್ನು ಮುಂದೆ ಈ ವಿಚಾರ ಯಾವ ತಿರುವು ಪಡೆದುಕೊಳ್ಳುತ್ತದೆ ಕಾದು ನೋಡಬೇಕು. ತಮಿಳುನಾಡು ವಿಧಾನಸಭೆಯಲ್ಲಿ ನಾಲ್ವರು ಬಿಜೆಪಿ ಸದಸ್ಯರಿದ್ದಾರೆ.