200 ವರ್ಷದಿಂದ ಇಲ್ಲದ ಗಣೇಶೋತ್ಸವ ಈಗ ಯಾಕೆ? ಈದ್ಗಾ ಮೈದಾನದಲ್ಲಿ ಯಥಾ ಸ್ಥಿತಿಗೆ ಸುಪ್ರೀಂ ಆದೇಶ!

Aug 30, 2022, 11:36 PM IST

ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಪಟ್ಟು ಹಿಡಿದ ಹಿಂದೂ ಸಂಘಟನೆಗಳಿಗೆ ಹಿನ್ನಡೆಯಾಗಿದೆ. ಸುಪ್ರೀಂ ಕೋರ್ಟ್ ಇಂದು ಮಹತ್ವದ ಆದೇಶ ನೀಡಿದೆ. ಯಥಾ ಸ್ಥಿತಿ ಕಾಪಾಡಿಕೊಳ್ಳುವಂತೆ ಸುಪ್ರೀಂ ಆದೇಶ ನೀಡಿದೆ. ಈ ಮೂಲಕ ಗಣೇಶೋತ್ಸವ ಆಚರಣೆಗೆ ಬ್ರೇಕ್ ಹಾಕಲಾಗಿದೆ. ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಮಹಾನಗರ ಪಾಲಿಕೆ ನಿರ್ಣಯ ಕೈಗೊಂಡಿತ್ತು. ಇದರ ವಿರುದ್ದ ಹೈಕೋರ್ಟ್ ಮೆಟ್ಟಿಲೇರಿದ್ದ ಮುಸ್ಲಿಂ ಬೋರ್ಡ್ ಅರ್ಜಿ ತಿರಸ್ಕರಿಸಿದ ಹೈಕೋರ್ಟ್, ಗಣೇಶೋತ್ಸವಕ್ಕೆ ಕೋರ್ಟ್ ಅನುಮತಿ ನೀಡಿದೆ. ಇತ್ತ ಚಿತ್ರದುರ್ಗದ ಮರುಘಾ ಶ್ರೀಗಳ ಮೇಲಿನ ಅತ್ಯಾಚಾರ ಪ್ರಕರಣ ಗಂಭೀರವಾಗುತ್ತಿದೆ. ಇದೀಗ 164ರ ಅಡಿಯಲ್ಲಿ ಬಾಲಕಿಯರು ಹೇಳಿಕೆ ಪಡೆಯಲಾಗಿದೆ. ಈ ಹೇಳಿಕೆಯೇ ಅಂತಿಮವಾಗಿದೆ. ಇನ್ನು ವಿಚಾರಣೆ ವೇಳೆ 164 ಅಡಿ ಹೇಳಿಕೆಯನ್ನು ಸುಳ್ಳು ಎಂದು ಹೇಳಲು ಸಾಧ್ಯವಿಲ್ಲ. ಇದೀಗ ಈ ಪ್ರಕರಣದಲ್ಲಿ 164 ಹೇಳಿಕೆ ಶ್ರೀಗಳಿಗೆ ಮುಳುವಾಗುತ್ತಾ?