Viral News: ಕುದಿಯುವ ಎಣ್ಣೆಗೆ ಕೈ ಹಾಕಿ ಪಕೋಡಾ ತೆಗೆದ ಭೂಪ!

Jan 9, 2022, 9:09 AM IST

ಮಹಾರಾ‍ಷ್ಟ್ರ(ಜ.09) ದಿನ ಬೆಳಗಾಗುತ್ತಿದ್ದಂತೆಯೇ ಸೋಶಿಯಲ್ ಮೀಡಿಯಾದಲ್ಲಿ ಅನೇಕ ಸುದ್ದಿಗಳು ವೈರಲ್ ಆಗುತ್ತವೆ. ಕೆಲವು ನಗೆಗಡಲಲ್ಲಿ ತೇಲಿಸಿದರೆ, ಇನ್ನು ಕೆಲವು ಆಕ್ರೋಶ ಹೆಚ್ಚಿಸುತ್ತವೆ. ಇವೆಲ್ಲದರ ನಡುವೆ ಇನ್ನು ಕೆಲವು ಅಚ್ಚರಿ ಹುಟ್ಟಿಸುತ್ತವೆ. ಹೀಗೆ ವೈರಲ್ ಆಗುವ ಸುದ್ದಿಗಳು ಅನೇಕರನ್ನು ಇಂಟರ್ನೆಟ್‌ ಸ್ಆರ್‌ ಆಗಿಸುತ್ತವೆ. ಸದ್ಯ ಇಂತಹುದೇ ಘಟನೆಯ ವಿಡಿಯೋ ಒಂದು ವೈರಲ್ ಆಗಿದೆ.

ಹೌದು ಮಹಾರಾ‍ಷ್ಟ್ರದ ವಿಡಿಯೋ ಇದಾಗಿದ್ದು, ಇಲ್ಲೊಬ್ಬ ಭೂಪ ಕುದಿಯುತ್ತಿದ್ದ ಎಣ್ಣೆಯೊಳಗೆ ಕೈ ಹಾಕಿ ಪಕೋಡಾ ತೆಗೆದು ಗ್ರಾಹಕರಿಗೆ ಕೊಟ್ಟಿದ್ದಾನೆ. ಸಾಮಾನ್ಯರಿಗೆ ಬಿಸಿ ಪಾತ್ರೆ ಅಥವಾ ನೀರು ತಾಗಿದರೆ ಸಾಕು ಜೀವ ಹೋದಂತಾಗುತ್ತದೆ. ಹೀಗಿರುವಾಗ ಈ ವ್ಯಕ್ತಿಯ ಈ ಅಸಾಮಾನ್ಯ ಕಲೆ ಎಲ್ಲರನ್ನು ಬೆರಗಾಗಿಸಿದೆ. 

ಇಷ್ಟೇ ಅಲ್ಲದೇ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ ಸುದ್ದಿಗಳ ಒಂದು ನೋಟ ಇಲ್ಲಿದೆ ನೋಡಿ