ಉಗ್ರ ಯಾಸಿನ್‌ಗೆ ಶಿಕ್ಷೆಯಾದರೆ ಭಾರತದ ವಿರುದ್ಧ ಘೋಷಣೆ, ಭಯೋತ್ಪಾದಕರಿಗೆ ಬಹುಪರಾಕ್

May 30, 2022, 3:51 PM IST

ಪಾಕಿಸ್ತಾನದ ನೆರವಿನೊಂದಿಗೆ ಕಾಶ್ಮೀರದಲ್ಲಿ ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ನೆರವು ನೀಡಿದ ಪ್ರಕರಣಗಳಲ್ಲಿ ಕಾಶ್ಮೀರದ ಕುಖ್ಯಾತ ಪ್ರತ್ಯೇಕವಾದಿ ಮುಖಂಡ ಯಾಸಿನ್‌ ಮಲಿಕ್‌ಗೆ  ಎನ್‌ಐಎ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಯಾಸಿನ್‌ ಮಲಿಕ್‌ ಓರ್ವ ಪಾಕಿಸ್ತಾನದಿಂದ ತರಬೇತಿ ಪಡೆದ ಕಾಶ್ಮೀರಿ ಪ್ರತ್ಯೇಕತಾವಾದಿ. ಈಗ 1980ರಿಂದ ಆರಂಭವಾಗಿ ಈವರೆಗೆ ಸುಮಾರು 30 ವರ್ಷ ಕಾಲ ಕಾಶ್ಮೀರದಲ್ಲಿ ನಡೆದ ಅನೇಕ ರಕ್ತಪಾತಗಳಿಗೆ ಕಾರಣವಾಗಿದ್ದ. ಕಾಶ್ಮೀರಿ ಪಂಡಿತರ ನರಮೇಧದ ಆರೋಪವೂ ಈತನ ಮೇಲಿದೆ. ಈತನಿಗೆ ಈಗ ಕೋರ್ಚ್‌, ಉಗ್ರವಾದಕ್ಕೆ ಹಣ ಪೂರೈಸಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದೆ.

ಮಹಿಳೆಯರು ಸೇರಿದಂತೆ ಜಮ್ಮು ಕಾಶ್ಮೀರ ಲಿಬರೇಶನ್‌ ಫ್ರಂಟ್‌ನ ಬೆಂಬಲಿಗರು ಮಲಿಕ್‌ ನಿವಾಸದ ಎದುರು ಸೇರಿ ಮಲಿಕ್‌ನ ಪರವಾಗಿ ಘೋಷಣೆಗಳನ್ನು ಕೂಗಿದ್ದಾರೆ. ಮಲಿಕ್‌ಗೆ ಶಿಕ್ಷೆ ವಿಧಿಸುವುದನ್ನು ವಿರೋಧಿಸಿದ್ದಾರೆ. ಈ ವೇಳೆ ಪ್ರತಿಭಟನಾಕಾರರು ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪ್ರತಿಭಟನೆ, ಕಲ್ಲು ತೂರಾಟ ನಡೆಸಿದ ಆರೋಪದ ಮೇಲೆ 10 ಜನರ ವಿರುದ್ಧ ಕಠಿಣವಾದ ಉಗ್ರ ನಿಗ್ರಹ ಕಾಯ್ದೆ ಹೊರಿಸಿ ಬಂಧಿಸಲಾಗಿದೆ.