Feb 26, 2020, 4:09 PM IST
ನವದೆಹಲಿ[ಫೆ.26]: ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪರ ಹಾಗೂ ವಿರೋಧಿಗಳ ನಡುವಿನ ಗಲಭೆ ಹೆಚ್ಚುತ್ತಿದ್ದು, ಹಿಂಸಾಚಾರ ಭುಗಿಲೆದ್ದಿದೆ. ಗಲಭೆಕೋರರನ್ನು ತಡೆಯಲು ಸರ್ಕಾರ ಎಲ್ಲಾ ರೀತಿಯ ಪ್ರಯತ್ನ ನಡೆಸಿದ್ದು, ನಿಷೇಧಾಜ್ಞೆ ಹಾಗೂ ಕಂಡಲ್ಲಿ ಗುಂಡು ಜಾರಿಗೊಳಿಸಿದೆ. ಹೀಗಿದ್ದರೂ ಮೃತರ ಸಂಖ್ಯೆ 21ಕ್ಕೇರಿದೆ.
ಹೀಗಿರುವಾಗ ಸುದ್ದಿಗೋಷ್ಟಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಿಂಸಾಚಾರವನ್ನು ಖಂಡಿಸಿದ್ದಾರೆ. ಅಲ್ಲದೇ ನಾಳೆ, ಗುರುವಾಗ ಇದನ್ನು ಖಂಡಿಸಿ ಕಾಂಗ್ರೆಸ್ ನಾಯಕರು ರಾಷ್ಟ್ರಪತಿ ಭವನಕ್ಕೆ ಶಾಂತಿಯುತ ಪಾದಯಾತ್ರೆ ನಡೆಸುವುದಾಗಿಯೂ ತಿಳಿಸಿದ್ದಾರೆ.
ಪಾದಯಾತ್ರೆ ಬಳಿಕ ರಾಷ್ಟ್ರಪತಿ ಕೋವಿಂದ್ ಭೇಟಿಯಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಹಾಗೂ ದೂರು ಸಲ್ಲಿಸುವುದಾಗಿ ಸೋನಿಯಾ ತಿಳಿಸಿದ್ದಾರೆ.
ಇನ್ನು ಇದೇ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಗುಡುಗಿದ ಕೈ ನಾಯಕಿ, ಹಿಂಸಾಚಾರ ಹತ್ತಿಕ್ಕಲು ಕೆಂದ್ರ ವಿಫಲವಾಗಿದೆ. ಗೇಹ ಸಚಿವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.