Dec 27, 2019, 4:01 PM IST
ಚಂಡೀಗಡ[ಡಿ.27]: ಜನನಾಯಕ್ ಜನತಾ ಪಾರ್ಟಿಯ ಹಿರಿಯ ನಾಯಕರೊಬ್ಬರು ಧಿಡೀರನೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರಿಂದಾಗಿ ಹರ್ಯಾಣದಲ್ಲಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡು ಡಿಸಿಎಂ ಆಗಿರುವ ದುಷ್ಯಂತ್ ಚೌಟಾಲಾ ಸದ್ಯ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ದುಷ್ಯಂತ್ ಚೌಟಾಲಾ ವಿರುದ್ಧ ಬಹಿರಂಗವಾಗಿಯೇ ಟೀಕಿಸಿದ್ದ, ಹರ್ಯಾಣದ ಶಾಸಕ ರಾಮ್ ಕುಮಾರ್ ಗೌತಮ್ ಬುಧವಾರದಂದು ಪಕ್ಷದ ಉಪ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಜೆಜೆಪಿ ಪಕ್ಷದ ಮುಖ್ಯಸ್ಥ ದುಷ್ಯಂತ್ ಚೌಟಾಲಾ ವಿರುದ್ಧ ಸಾರ್ವಜನಿಕವಾಗಿಯೇ ಟೀಕಿಸಿದ್ದ 73 ವರ್ಷದ ರಾಮ್ ಕುಮಾರ್ ಗೌತಮ್ 'ತಾನು ಉಪ ಮುಖ್ಯಮಂತ್ರಿಯಾಗಿದ್ದು ತನ್ನ ಪಕ್ಷದ ಶಾಸಕರ ಬೆಂಬಲದಿಂದ ಎಂಬುವುದನ್ನು ದುಷ್ಯಂತರ್ ಚೌಟಾಲಾ ಯಾವತ್ತೂ ಮರೆಯಬಾರದು' ಎಂದಿದ್ದಾರೆ. ರಾಮ್ ಕುಮಾರ್ ಗೌತಮ್ ಅಕ್ಟೋಬರ್ ತಿಂಗಳಲ್ಲಿ ನಡೆದಿದ್ದ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದಾಗ, ಬಿಜೆಪಿ ಸರ್ಕಾರ ರಚಿಲು ಬೆಂಬಲ ಸೂಚಿಸಿದ್ದ ಜೆಜೆಪಿ ಶಾಸಕರಲ್ಲಿ ಒಬ್ಬರು.
ರಾಮ್ ಕುಮಾರ್ ಗೌತಮ್ ಅನ್ವಯ ಉಪ ಮುಖ್ಯಮಂತ್ರಿ ತಮ್ಮ ಬಳಿ 11 ಖಾತೆಗಳನ್ನಿಟ್ಟುಕೊಂಡು ಕೇವಲ ಒಬ್ಬ ಶಾಸಕನಿಗೆ, ಪ್ರಮುಖವಲ್ಲದ ಖಾತೆಗೆ ಕಿರಿಯ ಸಚಿವರಾಗಿ ನೇಮಿಸಿರುವುದು ಸರಿಯಲ್ಲ ಎಂದಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ಕಟು ವಾಗ್ದಾಳಿ ನಡೆಸಿದ್ದ ಪಕ್ಷಕ್ಕೆ ಸರ್ಕಾರ ರಚಿಸಲು ದುಷ್ಯಂತ್ ಚೌಟಾಲಾ ಬೆಂಬಲ ಸೂಚಿಸಿದ್ದರು. ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವರು ಕಿಡಿ ಕಾರಿದ್ದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿವೆ