ಮೋದಿ ನಾಯಕತ್ವದಿಂದ ವಿದೇಶಾಂಗ ನೀತಿಯಲ್ಲಿ ಮಹತ್ತರ ಬದಲಾವಣೆ, ಜೈಶಂಕರ್ ಜೊತೆ ಸಂವಾದ್!

Aug 14, 2022, 5:54 PM IST

ಬೆಂಗಳೂರು(ಆ.14): ಭಾರತದ ವಿದೇಶಾಂಗ ನೀತಿಯನ್ನು ಇಡೀ ವಿಶ್ವವೇ ಹೊಗಳುತ್ತಿದೆ. ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ವಿದೇಶಾಂಗ ನೀತಿಗಳು ಕಾರ್ಯನಿರ್ವಹಿಸುತ್ತಿದೆ. ಭಾರತ ಸ್ವತಂತ್ರ್ಯ ವಿದೇಶಾಂಗ ನೀತಿಯನ್ನು ಶತ್ರುಗಳೇ ಹೊಗಳುತ್ತಿದ್ದಾರೆ. ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ ನಾಯಕತ್ವ. ಮೋದಿ ರಾಷ್ಟ್ರೀಯತೆ, ದೇಶದ ಜನರಿಗೆ ಒಳಿತು ಮಾಡುವ ಹಾಗೂ ದೇಶವನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ಯುವ ದಿಟ್ಟ ನಿರ್ಧಾರಗಳೇ ಕಾರಣ ಎಂದು ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ. ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆಗಿನ ಸಂವಾದ್ ವಿಶೇಷ ಸಂದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಜೈಶಂಕರ್ ಭಾರತದ ವಿದೇಶಾಂಗ ನೀತಿ, 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ, ಹರ್ ಘರ್ ತಿರಂಗ ಸೇರಿದಂತೆ ಹಲವು ವಿಚಾರಗಳ ಕುರಿತು ಮಾತನಾಡಿದ್ದಾರೆ.  

ವಿಶ್ವದ ರಾಜಕೀಯ ತಲ್ಲಣಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಮೋದಿಗಿದೆ. ಇದರ ಜೊತೆಗೆ ನಮಗೆ ಮುಕ್ತ ಸ್ವಾತಂತ್ರ್ಯ ನೀಡಿದ್ದಾರೆ ಎಂದು ಜೈಶಂಕರ್ ಹೇಳಿದ್ದಾರೆ. ನನ್ನ ಕುಟುಂಬದ ಯಾರೂ ರಾಜಕೀದಲ್ಲಿ ಇಲ್ಲ. ನಾನು ರಾಜಕೀಯಕ್ಕೆ ಬರಬೇಕು ಎಂದು ಯಾವತ್ತೂ ಅಂದುಕೊಂಡಿರಲಿಲ್ಲ. ಭಾರತದ ರಾಯಭಾರಿಯಾಗಿ ಚೀನಾ, ಅಮೆರಿದಕಲ್ಲಿ ಕರ್ತವ್ಯನಿರ್ವಹಿಸಿದ್ದಾರೆ. ವಿದೇಶಾಂಗ ಇಲಾಖೆ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. 45 ವರ್ಷಗಳಿಂದ ವಿದೇಶಾಂಗ ಇಲಾಖೆ ಜೊತೆ ಕೆಲಸ ಮಾಡುತ್ತಿದ್ದೇನೆ. ಮೋದಿ ಈ ಮಹತ್ತರ ಜವಾಬ್ದಾರಿ ತೆಗೆದುಕೊಳ್ಳಲು ಸೂಚಿಸಿದ ಕಾರಣ ವಿದೇಶಾಂಗ ಸಚಿವನಾಗಿದ್ದೇನೆ. ಇತರ ಯಾವುದೇ ರಾಜಕಾರಣಿ ಕರೆದಿದ್ದರೂ ನಾನು ರಾಜಕೀಯಕ್ಕೆ ಬರುತ್ತಿರಲಿಲ್ಲ ಎಂದು ಜೈಶಂಕರ್ ಹೇಳಿದ್ದಾರೆ.

ಶ್ರೀಲಂಕಾದಲ್ಲಿನ ಆರ್ಥಿಕ ಪರಿಸ್ಥಿತಿ, ಪಾಕಿಸ್ತಾನದಲ್ಲಿನ ಬಿಕ್ಕಟ್ಟು, ಚೀನಾ ಗಡಿ ವಿಚಾರ, ತೈವಾನ್ ಸಂಘರ್ಷ ಸೇರಿದಂತೆ ಹಲವು ವಿಚಾರಗಳ ಕುರಿತು ಜೈಶಂಕರ್ ಮುಕ್ತವಾಗಿ ಮಾತನಾಡಿದ್ದಾರೆ. ಸಂಪೂರ್ಣ ಸಂದರ್ಶನ ಇಲ್ಲಿದೆ.