News Hour: ಇಂಡಿ ಒಕ್ಕೂಟವನ್ನು ಹಿಂಡಿ ಹಿಪ್ಪೆ ಮಾಡ್ತಾರಾ ಅಖಿಲೇಶ್‌ ಯಾದವ್‌?

News Hour: ಇಂಡಿ ಒಕ್ಕೂಟವನ್ನು ಹಿಂಡಿ ಹಿಪ್ಪೆ ಮಾಡ್ತಾರಾ ಅಖಿಲೇಶ್‌ ಯಾದವ್‌?

Published : Oct 20, 2023, 11:43 PM IST

ಇಂಡಿ ಒಕ್ಕೂಟಕ್ಕೆ ಬಂಡಾಯದ ಬಿಸಿ ಎದುರಾಗಿದೆ. ಆಪ್‌ ಬಳಿಕ ಕಾಂಗ್ರೆಸ್‌ ನಾಯಕರಿಗೆ ಅಖಿಲೇಶ್‌ ಯಾದವ್‌ ಆಘಾತ ನೀಡಿದ್ದಾರೆ. ಮಧ್ಯಪ್ರದೇಶದಲ್ಲಿ ಬಿಕ್ಕಟ್ಟು ಎದುರಾಗಿರುವ ನಡುವೆ ಇಂಡಿ ಒಕ್ಕೂಟದಿಂದ ಸಮಾಜವಾದಿ ಪಕ್ಷ ಹೊರನಡೆಯಲಿದೆಯೇ ಎನ್ನುವ ಅನುಮಾನ ವ್ಯಕ್ತವಾಗಿದೆ. 

ಬೆಂಗಳೂರು (ಅ. 20):  2024ರ ಮಹಾಭಾರತಕ್ಕೆ ಪಂಚರಾಜ್ಯ ಚುನಾವಣೆಯೇ ಸೆಮಿಫೈನಲ್. ಎನ್ಡಿಎ V/S ಇಂಡಿ ಒಕ್ಕೂಟದ ಯುದ್ಧ ಈಗಲೇ ಶುರುವಾಗಿದೆ. ಆದರೆ, ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ಪಟ್ಟಿ ಬಿಡುಗಡೆ ಬಳಿಕ ಇಂಡಿಯಾ ಮೈತ್ರಿಕೂಟದಲ್ಲಿ ಭಿನ್ನಮತ ಸ್ಫೋಟಗೊಂಡಿದೆ.

ಉತ್ತರ ಪ್ರದೇಶ ಬಿಟ್ಟರೆ ಮಧ್ಯಪ್ರದೇಶದಲ್ಲೇ ಸಮಾಜವಾದಿ ಪಕ್ಷ ತನ್ನದೇ ಆದ ಮತ ಬ್ಯಾಂಕ್ ಹೊಂದಿದೆ.. 2018ರ ಮಧ್ಯಪ್ರದೇಶದ 52 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಒಂದೇ ಸ್ಥಾನದಲ್ಲಿ ಗೆದ್ದಿತ್ತು. ಆದರೆ, ಈ ಬಾರಿ ಇಂಡಿಯಾ ಮೈತ್ರಿ ರಚನೆ ಬಳಿಕ ಕಾಂಗ್ರೆಸ್ ಜತೆಗೂಡಿ ಕನಿಷ್ಠ 12 ಸ್ಥಾನ ಬಿಟ್ಟು ಕೊಡಲು ಬೇಡಿಕೆ ಇಟ್ಟಿತ್ತು. ಆದರೆ ಒಂದೂ ಸ್ಥಾನ ಬಿಟ್ಟು ಕೊಡದೇ, ಇಂಡಿಯಾ ಮೈತ್ರಿ ಲೋಕಸಭೆಗೆ ಮಾತ್ರ ಎಂಬ ಮಧ್ಯ ಪ್ರದೇಶ ಮಾಜಿ ಸಿಎಂ ಕಮಲನಾಥ್ ಹೇಳಿಕೆ ಅಖಿಲೇಶ್ ಯಾದವ್ ಪಿತ್ತ ನೆತ್ತಿಗೇರಿಸಿದೆ.

'ದೇಶಭಕ್ತ ಎನಿಸಿಕೊಳ್ಳಲು ನೆರೆಯ ದೇಶವನ್ನು ವಿರೋಧಿಸಲೇಬೇಕು ಅಂತೇನಿಲ್ಲ..', ಬಾಂಬೆ ಹೈಕೋರ್ಟ್‌ ತೀರ್ಪು!

ಮಾಜಿ ಸಿಎಂ ಕಮಲನಾಥ್ ಈ ಹೇಳಿಕೆಯಿಂದ ಸಿಡಿದೆದ್ದ ಅಖಿಲೇಶ್ ಯಾದವ್, ಕಾಂಗ್ರೆಸ್ ನಾಯಕರು ಇಂಡಿಯಾ ಮೈತ್ರಿಕೂಟ ಲೋಕಸಭೆಗೆ ಮಾತ್ರನಾ? ವಿಧಾನಸಭೆಗೆ ಇಲ್ವಾ ಎಂಬುದನ್ನ ಸ್ಪಷ್ಟಪಡಿಸಲಿ.. ಮುಂದಿನ ಲೋಕಸಭೆ ಈಗ ಅವರ ವ್ಯವಹಾರ ಹೇಗಿದೆಯೋ ಅದೇ ರೀತಿ ನಮ್ಮ ವ್ಯವಹಾರ ಇರುತ್ತೆ ಅನ್ನುತ್ತಲೇ ಮೈತ್ರಿಯಿಂದ ಹೊರಬರುವ ಮುನ್ಸೂಚನೆ ನೀಡಿದ್ದಾರೆ. ಮಧ್ಯ ಪ್ರದೇಶದಲ್ಲಿ 31 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಿದ್ದು, ಛತ್ತೀಸ್‌ಗಢ ರಾಜಸ್ಥಾನದಲ್ಲೂ ಸ್ಪರ್ಧಿಸುವ ಸುಳಿವು ನೀಡಿದ್ದಾರೆ.

45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
21:28ಸಾಲ ಮಾಡಿ ತುಪ್ಪ ತಿನ್ನಿಸಬೇಕಾ ಮುಖ್ಯಮಂತ್ರಿ ವಿಜಯ್? ಏನ್ ಮಾಡ್ತಾರೆ ದಳಪತಿ ?
19:23₹10 ಲಕ್ಷ ಕೋಟಿ ಸಾಲದ ಬೆಟ್ಟ.. ಹೊಸ ಸರ್ಕಾರಕ್ಕೆ ಬಿಗ್ ಚಾಲೆಂಜ್: ವಿಜಯ್ ವಿಜಯ ತಂತ್ರವೇನು?
19:54ಮುಖ್ಯಮಂತ್ರಿ ವಿಜಯ್ ಫಸ್ಟ್ ಡೇ ಫಸ್ಟ್ ಶೋ: ಭರವಸೆಗಳ ಬೆಟ್ಟ, ಖಜಾನೆಗೆ ಭಾರಿ ಹೊರೆ!
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
22:24ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!
24:25ಭಾರತದ ಬಳಿಯೂ ಇದೆ ಮಲಕ್ಕಾ ಜಲಸಂಧಿ ಮುಚ್ಚಿದ್ರೆ ಕೆಲ ದೇಶದ ಕತೆ ಗೋವಿಂದ
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
Read more