ಉಕ್ರೇನ್‌ನಲ್ಲಿರುವ ಕನ್ನಡಿಗರನ್ನು ಭಾರತಕ್ಕೆ ಕರೆ ತರುವ 'ಆಪರೇಷನ್ ಗಂಗಾ'ಗೆ ವಾಯುಸೇನೆ ಬಲ ನೀಡಿದೆ. ಆಪರೇಷನ್ ಗಂಗಾಗೆ ವಾಯುಸೇನೆ ಬಳಸುವಂತೆ ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ. ಇದುವರೆಗೂ ಏರ್ ಇಂಡಿಯಾ ವಿಮಾನ ಬಳಸಲಾಗುತ್ತಿತ್ತು.
ಉಕ್ರೇನ್‌ನಲ್ಲಿರುವ ಕನ್ನಡಿಗರನ್ನು ಭಾರತಕ್ಕೆ ಕರೆ ತರುವ 'ಆಪರೇಷನ್ ಗಂಗಾ'ಗೆ ವಾಯುಸೇನೆ ಬಲ ನೀಡಿದೆ. ಆಪರೇಷನ್ ಗಂಗಾಗೆ ವಾಯುಸೇನೆ ಬಳಸುವಂತೆ ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ. ಇದುವರೆಗೂ ಏರ್ ಇಂಡಿಯಾ ವಿಮಾನ ಬಳಸಲಾಗುತ್ತಿತ್ತು. ಈಗ ಸಿ-17 ಗ್ಲೋಬ್ ಮಾಸ್ಟರ್ ಯುದ್ಧ ವಿಮಾನ ನಿಯೋಜನೆ ಮಾಡುವ ಸಾಧ್ಯತೆ ಇದೆ. ಕಡಿಮೆ ಸಮಯದಲ್ಲಿ ಹೆಚ್ಚು ಜನರ ಸ್ಥಳಾಂತರ ಮಾಡಲು ಅನುಕೂಲವಾಗುತ್ತದೆ.
ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಎಲ್ಲವೂ ಅಯೋಮಯವಾಗಿದೆ. ಹೌದು, ಉಕ್ರೇನ್‌ನಲ್ಲಿರುವ ರಾಜ್ಯದ ವಿದ್ಯಾರ್ಥಿಗಳಿಗೆ ರೋಗದ ಭೀತಿ ಎದುರಾಗಿದೆ. ಸರಿಯಾಗಿ ನೀರು, ಆಹಾರ ಸಿಗದೆ ಮೆಟ್ರೋ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಇದರ ಜೊತೆಗೆ ನೆಗಡಿ, ಜ್ವರದ ಭೀತಿ ಕಾಡುತ್ತಿದೆ.