ಜುಲೈ 26.. ಪ್ರತಿ ಭಾರತೀಯನೂ ಹೆಮ್ಮೆಯಿಂದ ಎದೆಯುಬ್ಬಿಸಿಕೊಂಡು ತಿರುಗಬೇಕಾದ ದಿನ ಇದು. ಗುಳ್ಳೆ ನರಿಯ ಹಾಗೆ, ದಾಳಿ ನಡೆಸೋಕೆ ಬಂದವರ ಹೆಡೆಮುರಿ ಕಟ್ಟಿದ ದಿನ ಇದು. ಇಡೀ ಜಗತ್ತಿಗೆ ಭಾರತದ ತಾಕತ್ತು ಏನು ಅಂತ ತೋರಿಸಿಕೊಟ್ಟ ದಿನ ಇದು
ಜುಲೈ 26.. ಪ್ರತಿ ಭಾರತೀಯನೂ ಹೆಮ್ಮೆಯಿಂದ ಎದೆಯುಬ್ಬಿಸಿಕೊಂಡು ತಿರುಗಬೇಕಾದ ದಿನ ಇದು. ಗುಳ್ಳೆ ನರಿಯ ಹಾಗೆ, ದಾಳಿ ನಡೆಸೋಕೆ ಬಂದವರ ಹೆಡೆಮುರಿ ಕಟ್ಟಿದ ದಿನ ಇದು. ಇಡೀ ಜಗತ್ತಿಗೆ ಭಾರತದ ತಾಕತ್ತು ಏನು ಅಂತ ತೋರಿಸಿಕೊಟ್ಟ ದಿನ ಇದು
ಕೆಲವು ಸಲ ಹಿಮಾಲಯದ ವಾತಾವರಣ ಮನುಷ್ಯರಿಗೆ ಸಹಿಸೋಕೂ ಸಾಧ್ಯವಾಗದಷ್ಟು ಭೀಕರವಾಗಿ ಬದಲಾಗಿಬಿಡುತ್ತೆ. ಹಾಗಾಗಿನೇ, ಭಾರತ ಮತ್ತು ಪಾಕಿಸ್ತಾನ ಒಂದು ಒಪ್ಪಂದ ಮಾಡಿಕೊಂಡವು. ಪರಿಸ್ಥಿತಿ ಪ್ರತೀಕೂಲವಿದ್ದಾಗ, ವಾತಾವರಣ ಅಪಾಯಕಾರಿಯಾಗಿದ್ದಾಗ, ಈ ಪರ್ವತದ ನೆತ್ತಿ ಮೇಲೆ ಯಾರೂ ಇರಬಾರದು. ಯಾರೂ ಇನ್ನೊಬ್ಬರ ಮೇಲೆ ಅತಿಕ್ರಮಣ ಮಾಡಬಾರದು ಅಂತ. ಭಾರತವೇನೋ ಈ ಅಗ್ರಿಮೆಂಟಿಗೆ ಕಟಿಬದ್ಧವಾಗಿತ್ತು.. ಆದ್ರೆ ಪಾಕಿಸ್ತಾನ ಈ ನಿಯಮ ಮುರಿದಿತ್ತು. 1999 ಏಪ್ರಿಲ್ ತಿಂಗಳ ಅಂತ್ಯದ ವೇಳೆಗೆ, ಪಾಕಿಸ್ತಾನಿ ಸೈನಿಕರು ಕಾರ್ಗಿಲ್ ಪರ್ವತ ಪ್ರದೇಶವನ್ನ ಆವರಿಸಿಕೊಂಡರು.
ಈ ಪರಿ ಪ್ರಮಾಣದಲ್ಲಿ ಪಾಕ್ ಸೈನಿಕರು ಭಾರತದ ಗಡಿ ದಾಟಿ ಬಂದಿದ್ದು ಯಾರಿಗೂ ಗೊತ್ತೇ ಆಗಿರಲಿಲ್ಲ. ಅದನ್ನ ಗಮನಿಸಿದ್ದು ಯಾರು ಗೊತ್ತಾ? ತಾನ್ಶಿ ನಾಮ್ಗ್ಯಲ್ ಅನ್ನೋ ಕುರಿ ಕಾಯುವ ವ್ಯಕ್ತಿ.. ಆತ ಕುರಿ ಕಾಯೋಕೆ ಹೋಗಿದ್ದಾಗ, ದೂರದಲ್ಲಿ ಯಾರೋ ಬೈನಾಕ್ಯುಲರ್ ಹಿಡ್ಕೊಂಡು ನೋಡ್ತಾ ಇದ್ರು. ಕಾರ್ಗಿಲ್ ಪರ್ವತ ಪ್ರದೇಶದಲ್ಲಿ ಯಾರೋ 6 ಜನ ಇದ್ದಾರೆ ಅಂತ ಕುರಿ ಕಾಯೋ ವ್ಯಕ್ತಿ, ಭಾರತೀಯ ಸೈನಿಕರಿಗೆ ತಿಳಿಸ್ತಾನೆ.. ಬಹುಶಃ ಯಾರೋ ಹಳ್ಳಿಯವರು ಹೋಗಿರಬೇಕು ಅಂತ ಅಂದುಕೊಂಡ ಭಾರತೀಯ ಸೈನಿಕರು, ಮೊದಲಿಗೆ 6 ಜನರ ಸೈನಿಕರ ತಂಡವನ್ನು ಕಳಿಸಿಕೊಡ್ತಾರೆ. ಆದ್ರೆ ಅವರ್ಯಾರೂ ವಾಪಸ್ ಬರೋದೇ ಇಲ್ಲ. ಕಾರ್ಗಿಲ್ ಪ್ರದೇಶವನ್ನ ಪಾಕಿಸ್ತಾನ ಸೇನೆ ವಶಕ್ಕೆ ಪಡ್ಕೊಂಡಿದೆ ಅಂತ ಗೊತ್ತಾಗಿದ್ದು ಯಾವಾಗ ಗೊತ್ತಾ? ಕ್ಯಾಪ್ಟನ್ ಸೌರಭ್ ಕಾಲಿಯಾ ನಿಗೂಢವಾಗಿ ಕಾಣೆಯಾದಾಗ...!