ರಾಮಮಂದಿರ ಧ್ವಂಸ ಬಳಿಕ ಕಠೋರ ಪ್ರತಿಜ್ಞೆ ಮಾಡಿದ್ದ ಕುಟುಂಬ, 500 ವರ್ಷದ ಬಳಿಕ ಅಂತ್ಯ!

Jan 20, 2024, 11:04 PM IST

ಬಾಬರ್ ಸೈನ್ಯ ರಾಮ ಮಂದಿರ ಧ್ವಂಸಗೊಳಿಸುವಾಗ ಭಾರಿ ವಿರೋಧ ವ್ಯಕ್ತವಾಗಿತ್ತು. ಹೋರಾಟ,ಬಲಿದಾನಗಳು ನಡೆದಿತ್ತು. ಆದರೆ 1528ರಲ್ಲಿ ಬಾಬರ್ ಸೈನ್ಯ ರಾಮ ಮಂದಿರ ಧ್ವಂಸ ಮಾಡಿಬಿಟ್ಟಿತ್ತು. ಈ ವೇಳೆ ಹೋರಾಡಿದ ಸೂರ್ಯವಂಶದ ಹೀರಿಕ ಗಜರಾಜ್ ಸಿಂಗ್ ಸೂರ್ಯಕುಂಡ್ ಬಳಿ ಭೀಷ್ಮ ಪ್ರತಿಜ್ಞೆ ತೆಗೆದುಕೊಂಡಿದ್ದರು. ಮೊಘಲರಿಂದ ರಾಮನ ಬಿಡಿಸಿ ಮತ್ತೆ ರಾಮ ಮಂದಿರ ಕಟ್ಟುವವರೆಗೆ ತಲೆಗೆ ಪಗಡಿ ಕಟ್ಟಲ್ಲ, ಚಪ್ಪಲಿ ಹಾಕಲ್ಲ, ಛತ್ರಿ ಹಿಡಿಯಲ್ಲ, ಮಕ್ಕಳ ಮದುವೆಗಳನ್ನು ಮಂಟಪದಲ್ಲಿ ಮಾಡಲ್ಲ ಎಂದು ಪ್ರತಿಜ್ಞೆ ಮಾಡಿದ್ದರು. ಇದಾದ ಬಳಿಕ 10 ತಲೆಮಾರು ಇದೇ ಪ್ರತಿಜ್ಞೆಯನ್ನು ಪಾಲಿಸಿಕೊಂಡಿದೆ. ಇದೀಗ 10ನೇ ತಲೆಮಾರು ರಾಮ ಮಂದಿರ ನಿರ್ಮಾಣವಾಗಿರುವ ಹಿನ್ನಲೆಯಲ್ಲಿ ಬರೋಬ್ಬರಿ 500 ವರ್ಷಗಳ ಪ್ರತಿಜ್ಞೆ ಅಂತ್ಯಗೊಳಿಸಿದ್ದಾರೆ.