Aug 19, 2020, 2:56 PM IST
ಬೆಂಗಳೂರು (ಆ. 19): 2020 ನೇ ವರ್ಷ ಒಂದಲ್ಲ ಒಂದು ಸಂಕಷ್ಟಗಳನ್ನು ತಂದೊಡ್ಡುತ್ತಲೇ ಇದೆ. ಒಂದಾದ ಮೇಲೊಂದರಂತೆ ಜನರಿಗೆ ಸಂಕಷ್ಟಗಳನ್ನು ತಂದೊಡ್ಡುತ್ತಿದೆ. ಕಳೆದ 6 ತಿಂಗಳಿಂದ ಕೊರೊನಾ ಆಯ್ತು, ಈಗ ವರುಣನ ಆರ್ಭಟ ಜೋರಾಗಿದೆ. ಎಲ್ಲೆಲ್ಲೂ ವರುಣನ ಅಬ್ಬರ ಜೋರಾಗಿದೆ. ಜನಜೀವನ ಅಸ್ತವ್ಯಸ್ತವಾಗಿದೆ. ಭೂಕುಸಿತ, ಧರಾಶಾಹಿಯಾದ ಮರಗಳು, ಬೆಳೆ ನಾಶ, ಕುಸಿದು ಬಿದ್ದ ಮನೆಗಳು, ಬರೀ ಇಂತಹ ದೃಶ್ಯಗಳು ಕಾಣ ಸಿಗುತ್ತಿವೆ. ಸಾಕಪ್ಪಾ ವರುಣ, ಆರ್ಭಟ ನಿಲ್ಲಿಸು ಅಂತ ಜನ ಮೊರೆ ಇಡುತ್ತಿದ್ದಾರೆ. ಮಳೆ ಆರ್ಭಟಕ್ಕೆ 11 ರಾಜ್ಯಗಳು ನಲುಗಿ ಹೋಗಿದೆ. ಕರ್ನಾಟಕಕ್ಕೆ ಬಂದರೆ ಕರಾವಳಿ, ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಹೀಗೆ ಮುಂದುವರೆದರೆ ಇನ್ನಷ್ಟು ಅಪಾಯ ಗ್ಯಾರಂಟಿ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ..!