ಕೆಂಬ್ರಿಡ್ಜ್ ಭಾಷಣದಲ್ಲಿ ಚೀನಾ ಸಮರ್ಥನೆ, ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ, ನಾನು ಉಗ್ರರ ನೋಡಿದೆ, ಅವರೂ ನನ್ನನ್ನೂ ನೋಡಿದರು. ಹೀಗೆ ರಾಹುಲ್ ಗಾಂಧಿ ಭಾರತವನ್ನು ಮತ್ತೆ ಬ್ರಿಟಿಷರ ಕಾಲಕ್ಕೆ ಕೊಂಡೊಯ್ದಿದ್ದಾರೆ. ರಾಹುಲ್ ಆಡಿದ ಮಾತುಗಳ ಹಿಂದಿನ ಟೂಲ್‌ಕಿಟ್ ಏನು? ಇದರ ಹಿಂದಿನ ಉದ್ದೇಶವೇನು?
ಲಂಡನ್‌ನಲ್ಲಿ ರಾಹುಲ್ ಗಾಂಧಿ ಭಾರತಕ್ಕೆ ಅವಮಾನ ಮಾಡಿದ್ದು ಮಾತ್ರವಲ್ಲ, ಬ್ರಿಟಿಷರ ಕಾಲು ಹಿಡಿಯುವ ಸಂಪ್ರದಾಯವನ್ನು ಕಾಂಗ್ರೆಸ್ ಆರಂಭಿಸಲು ಹೊರಟಿದೆ ಅನ್ನೋ ಆರೋಪಗಳು ಕೇಳಿಬಂದಿದೆ. ವಿದೇಶದಲ್ಲಿ ರಾಹುಲ್ ಗಾಂಧಿ ವಿದೇಶದಲ್ಲಿ ಆಡಿದ ಮಾತುಗಳು ಥಟ್ ಅಂತ ಹೇಳಿದ ಉತ್ತರಗಳಲ್ಲ. ಇವು ಟೂಲ್ ಕಿಟ್ ಭಾಗ ಅನ್ನೋ ಆರೋಪಕ್ಕೆ ಹಲವು ಪುರಾವೆಗಳು ಹರಿದಾಡುತ್ತಿದೆ. ಪ್ರಜಾಪ್ರಭುತ್ವ ಅಪಾಯದಲ್ಲಿದೆ, ಆರ್‌ಎಸ್ಎಸ್, ಬಿಜೆಪಿ , ಕಾಶ್ಮೀರ ಸೇರಿದಂತೆ ಹತ್ತು ಹಲವು ವಿಚಾರಗಳನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮಾತನಾಡಿದ್ದಾರೆ. ಇದು ಆಕ್ರೋಶದ ಜ್ವಾಲೆ ಹೊತ್ತಿಸಿದೆ. ಇಷ್ಟೇ ಅಲ್ಲ ಭಾರತ್ ಜೋಡೋ ಮೂಲಕ ರಾಹುಲ್ ಸಂಪಾದಿಸಿದ ಗೌರವಯುತ ಸ್ಥಾನವನ್ನು ಮತ್ತೆ ಕಸಿದುಕೊಂಡಿದೆ. ಅಷ್ಟಕ್ಕೂ ರಾಹುಲ್ ಆಡಿದ ಮಾತುಗಳ ಹಿಂದೆ ಸೊರೊಸ್ ಆರೋಪಕ್ಕೆ ತುಪ್ಪ ಸುರಿಯುವ ಹುನ್ನಾರವಿತ್ತಾ?