Dec 28, 2023, 11:40 PM IST
ಬೆಂಗಳೂರು (ಡಿ.28): ಕಾಂಗ್ರೆಸ್ ಪಕ್ಷ ಸ್ಥಾಪನೆಯಾಗಿ ಬರೋಬ್ಬರಿ 139 ವರ್ಷ. ಗುರುವಾರ ನಾಗ್ಪುರದಲ್ಲಿ ಕಾಂಗ್ರೆಸ್ ಸಂಸ್ಥಾಪನಾ ಸಮಾವೇಶ ನಡೆಸಿ, 2024ರ ಲೋಕಸಭಾ ಸಮರಕ್ಕೆ ಕಹಳೆ ಮೊಳಗಿಸಿವೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಮೋದಿ ಕಟ್ಟಿ ಹಾಕಲೇಬೇಕೆಂದು ಕಾಂಗ್ರೆಸ್ ಪ್ಲಾನ್ ಮಾಡ್ತಿದೆ.
ಅದರ ಭಾಗವಾಗಿ ಭಾರತ ನ್ಯಾಯ ಯಾತ್ರೆಗೆ ನಿರ್ಧರಿಸಿದ್ದು, ಮಣಿಪುರದಿಂದ ಮುಂಬೈ ವರೆಗೆ ರಾಹುಲ್ ಹೆಜ್ಜೆ ಹಾಕಲಿದ್ದಾರೆ. ಗುರುವಾರ ನಾಗ್ಪುರದಲ್ಲಿ ಕಾಂಗ್ರೆಸ್ ಸಂಸ್ಥಾಪನಾ ದಿನದಂದು ‘ನಾವು ತಯಾರಾಗಿದ್ದೇವೆ’ ಎಂದು ಅದ್ಧೂರಿ ಸಮಾವೇಶ ನಡೆಸಿತು.
ಅಯೋಧ್ಯೆಯಲ್ಲಿ 11 ಸಾವಿರ ಕೋಟಿಯ ಯೋಜನೆಗಳಿಗೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ!
ನಾಗ್ಪುರದಲ್ಲಿ ನಡೆದ ಸಮಾವೇಶದಿಂದಾಗಿ ಲೋಕಸಭಾ ಸಮರಕ್ಕೆ ಕಾಂಗ್ರೆಸ್ ಬಿಗ್ ಕಿಕ್‌ಸ್ಟಾರ್ಟ್ ಸಿಕ್ಕಂತಾಗಿದೆ. ದೆಹಲಿ ಕಾಂಗ್ರೆಸ್ ಕಚೇರಿಯಲ್ಲಿ ಧ್ವಜಾರೋಹಣ ಬಳಿಕ ಖರ್ಗೆ ನಾಗ್ಪುರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ರಾಹುಲ್ ಗಾಂಧಿ, ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಕರ್ನಾಟಕ ಡಿಸಿಎಂ ಡಿಕೆಶಿ, ಹಿಮಾಚಲ ಸಿಎಂ ಸುಖದೇವ್ ಸಿಂಗ್ ಸೇರಿ ಅನೇಕ ನಾಯಕರು ಹಾಜರಿದ್ದರು. ಇನ್ನು ಕರ್ನಾಟಕ ಕಾಂಗ್ರೆಸ್, ಸಂಸ್ಥಾಪನಾ ದಿನವೇ ಯಡವಟ್ಟು ಮಾಡಿಕೊಂಡಿದೆ. ಟ್ವಿಟರ್ ಖಾತೆಯಲ್ಲಿ ಶುಭ ಕೋರಿ ಹಾಕಿದ ಪೋಸ್ಟರ್ನಲ್ಲಿ ಖರ್ಗೆ ಫೋಟೋನೇ ಮಿಸ್ ಆಗಿತ್ತು.