ಕೆಲಸಗಾರನ ಮಗಳಿಗೆ ಕೊರೋನಾ ದೃಢಪಟ್ಟ ಬೆನ್ನಲ್ಲೇ ಶುಕ್ರವಾರ ಮನಮೋಹನ್ ಸಿಂಗ್ ಮನೆಗೆ ಕ್ವಾರಂಟೈನ್ ನೋಟಿಸ್ ಅಂಟಿಸಲಾಗಿದೆ. ಜೊತೆಗೆ ಮನೆಯಿಂದ ಯಾರೂ ಹೊರ ಬರಬಾರದೆಂದು ಮುನ್ನೆಚ್ಚರಿಕೆಯನ್ನು ಅಧಿಕಾರಿಗಳು ನೀಡಿದ್ದಾರೆ.
ನವದೆಹಲಿ(ಜೂ.13): ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರನ ಮಗಳಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಮಾಜಿ ಪ್ರಧಾನಿ ಮನೆಗೆ ಅಧಿಕಾರಿಗಳು ಕ್ವಾರಂಟೈನ್ ನೋಟಿಸ್ ಜಾರಿಗೊಳಿಸಿದ್ದಾರೆ.
ಕೆಲಸಗಾರನ ಮಗಳಿಗೆ ಕೊರೋನಾ ದೃಢಪಟ್ಟ ಬೆನ್ನಲ್ಲೇ ಶುಕ್ರವಾರ ಮನಮೋಹನ್ ಸಿಂಗ್ ಮನೆಗೆ ಕ್ವಾರಂಟೈನ್ ನೋಟಿಸ್ ಅಂಟಿಸಲಾಗಿದೆ. ಜೊತೆಗೆ ಮನೆಯಿಂದ ಯಾರೂ ಹೊರ ಬರಬಾರದೆಂದು ಮುನ್ನೆಚ್ಚರಿಕೆಯನ್ನು ಅಧಿಕಾರಿಗಳು ನೀಡಿದ್ದಾರೆ.
ಸೋಂಕಿತ ಮಗಳ ತಂದೆಗೆ ಕೆಲಸಕ್ಕೆ ಬರಬಾರದು ಎಂದು ಸೂಚಿಸಲಾಗಿದೆ. ಕಾಂಗ್ರೆಸ್ ಮುಖಂಡರು ಮಾಜಿ ಪ್ರಧಾನಿಯ ಯೋಗಕ್ಷೇಮ ವಿಚಾರಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.