ಪೊಲೀಸ್ ನೇಮಕಾತಿ ಹಗರಣದ ಮಾಸ್ಟರ್ ಮೈಂಡ್ ಎಡಿಜಿಪಿ ಅಮೃತ್ ಪೌಲ್ ಅರೆಸ್ಟ್ ಬೆನ್ನಲ್ಲೇ ರಾಜ್ಯ ಸರ್ಕಾರ ಮತ್ವದ ಆದೇಶ ನೀಡಿದೆ. ಬಂಧನದ ಬೆನ್ನಲ್ಲೇ ಪೌಲ್ ಅಮಾನತು ಮಾಡಲಾಗಿದೆ. ಇತ್ತ ಲಂಚ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಐಎಸ್ ಅಧಿಕಾರಿ ಮಂಜುನಾಥ್ ಕೂಡ ಅಮಾನತು ಮಾಡಲಾಗಿದೆ. ರಾಜ್ಯದ ಇತಿಹಾಸದಲ್ಲಿ ಎಡಿಜಿಪಿ ಬಂಧನ ಇದೇ ಮೊದಲು. ಮೂರು ಬಾರಿ ವಿಚಾರಣೆಗೆ ಹಾಜರಾಗಿದ್ದ ಪೌಲ್, ನಾಲ್ಕನೇ ಬಾರಿ ಬಂಧನವಾಗಿದ್ದಾರೆ. ಪೊಲೀಸ್ ನೇಮಕಾತಿ ಹಗರಣದಲ್ಲಿ ಎಡಿಜಿಪಿ ಬಂಧನವಾಗಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ಮಾಡಿದೆ. ಗೃಹ ಸಚಿವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದೆ.